ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ ಹೈಸ್ಕೂಲ್‌ನಲ್ಲಿ ಕಾರಡ್ಕಕ್ಕೆ ಕಿರೀಟ
ಕುಂಬಳೆ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ಹೈಸ್ಕೂಲ್ ವಿಭಾಗದಲ್ಲಿ ಕಾರಡ್ಕ ಜಿವಿಎಚ್‌ಎಸ್ ಎಸ್ ೧೮೮ ಅಂಕ ಪಡೆದು ಚಾಂಪ್ಯನ್ ಆಗಿದೆ. ನೀರ್ಚಾಲ್ ಎಂಎಸ್‌ಸಿಎಚ್ ಎಸ್‌ಎಸ್‌ಗೆ ೧೬೭ ಅಂಕ ಲಭಿಸಿದೆ.
ಹೈಯರ್ ಸೆಕೆಂಡರಿ ವಿಭಾಗದಲ್ಲಿ ಕಾಟುಕುಕ್ಕೆ ಎಚ್‌ಎಸ್‌ಎಸ್ ೧೮೧ ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದರೆ, ಕುಂಬಳೆ ಜಿಎಚ್‌ಎಸ್ ಎಸ್ ೧೭೩ ಅಂಕ ಪಡೆದು ದ್ವಿತೀಯ ಸ್ಥಾನ ಗಳಿಸಿದೆ.
ಎಲ್‌ಪಿ ವಿಭಾಗದಲ್ಲಿ ಚೆನ್ನಂಗೋಡು ಎಎಲ್‌ಪಿ, ಪೆರಡಾಲ ಎಲ್‌ಪಿಎ ಸ್‌ಗಳು ೬೩ ಅಕಗಳೊಂದಿಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿವೆ. ಬದಿಯಡ್ಕ ಭಾರತೀ ವಿದ್ಯಾಪೀಠ, ಕಾರಡ್ಕ ಜಿವಿಎಚ್ ಎಸ್‌ಎಸ್ ಸೂರಂಬೈಲ್ ಶಾಲೆ, ಕುಂಬಳೆ ಹೋಲಿ ಫ್ಯಾಮಿಲಿ, ಮುಳ್ಳೇರಿಯ ವಿದ್ಯಾಶ್ರೀ ಶಾಲೆಗಳು ೬೧ ಅಂಕ ಪಡೆದು ದ್ವಿತೀಯ ಸ್ಥಾನ ಹಂಚಿಕೊಂಡಿವೆ.
ಯುಪಿ ವಿಭಾಗದಲ್ಲಿ ಕುಂಬಳೆ ಹೋಲಿ ಫ್ಯಾಮಿಲಿಗೆ ೮೦ ಅಂಕ ಲಭಿಸಿದ್ದು, ಕಾರಡ್ಕ ಶಾಲೆಗೆ ೭೬ ಅಂಕ ಲಭಿಸಿದೆ. ಯುಪಿ ಸಂಸ್ಕೃತೋತ್ಸವದಲ್ಲಿ ಎಂಎಚ್‌ಸಿ ನೀರ್ಚಾಲ್, ಸ್ವರ್ಗ ಎಸ್‌ವಿಎ ೮೮ ಅಂಕ ಪಡೆದು ಪ್ರಥಮ ಸ್ಥಾನಕ್ಕೆ ಅರ್ಹವಾಗಿವೆ. ಪೆರ್ಲ, ಬೇಳ ಶಾಲೆಗಳು ೮೩ ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಹೈಸ್ಕೂಲ್ ವಿಭಾಗ ಸಂಸ್ಕೃತೋತ್ಸವದಲ್ಲಿ ನೀರ್ಚಾಲು ಶಾಲೆಗೆ ೮೦ ಅಂಕ, ಬದಿಯಡ್ಕ ಭಾರತೀ ವಿದ್ಯಾಲಯಕ್ಕೆ ೭೬ ಅಂಕ ಲಭಿಸಿದೆ. ಅರಬಿಕ್ ಕಲೋತ್ಸವದ ಎಲ್‌ಪಿ ವಿಭಾಗದಲ್ಲಿ ಅಡೂರು ಜಿಎಚ್ ಎಸ್‌ಎಸ್, ಎಂಕೆಎಂಎಸ್ ಶಾಲೆಗಳು ೭೫ ಅಂಕ ಗಳಿಸಿವೆ. ಯುಪಿ ವಿಭಾಗದ ಅರಬಿಕ್ ಸಾಹಿತ್ಯೋತ್ಸವದಲ್ಲಿ ಕುಂಬಳೆ ಶಾಲೆ ೬೫, ಮೊಗ್ರಾಲ್ ಶಾಲೆ ೬೧ ಅಂಕ ಪಡೆದಿವೆ. ಹೈಸ್ಕೂಲ್ ವಿಭಾಗದಲ್ಲಿ ಅಡೂರು ಶಾಲೆಗೆ ೬೩ ಅಂಕ, ಕುಂಬಳೆ ಶಾಲೆಗೆ ೭೯ ಅಂಕ ಲಭಿಸಿದೆ. ಕುಂಬಳೆ ಎಇಬಿ ಶಶಿಧರ ಟ್ರೋಫಿಗಳನ್ನು ವಿತರಿಸಿದರು.