ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಗೆ ಕಿರೀಟ
ಪೆರ್ಲ: ಪೇರಾಲ್ ಸರಕಾರಿ ಎಲ್.ಪಿ ಶಾಲೆಯಲ್ಲಿ ನಡೆದ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವದಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಹೈಯರ್ ಸೆಕೆಂಡರಿ ಶಾಲೆಯು ಹೈಯರ್ ಸೆಕೆಂಡರಿ ವಿಭಾಗದಲ್ಲಿ ೧೮೧ ಅಂಕದೊAದಿಗೆ ಚಾಂಪಿಯನ್ ಪಟ್ಟ ಪಡೆದಿದೆ.
ಗ್ರೂಪ್ ಸ್ಪರ್ಧೆಗಳಾದ ತಿರುವಾದಿರ, ದಫ್ ಮುಟ್,ನಾಡನ್ ಪಾಟ್, ಗ್ರೂಪ್ ಡ್ಯಾನ್ಸ್, ವಂಜಿ ಪಾಟ್, ಒಪ್ಪನ, ಚೆಂಡೆ ಮೇಳ ಹಾಗೂ ಮೂಕಾಭಿನಯದಲ್ಲಿ ಎ ಗ್ರೇಡ್, ಇಂಗ್ಲಿಷ್ ಸ್ಕಿಟ್, ಕೋಲ್ಕಳಿ, ಎಂಬೀ ಸ್ಪರ್ಧೆಗಳಲ್ಲಿ ಬಿ ಮತ್ತು ಸಿ ಗ್ರೇಡ್ ಲಭಿಸಿದೆ, ವೈಯಕ್ತಿಕ ಸ್ಪರ್ಧೆಗಳಾದ ಉರ್ದು ಕಥಾ ರಚನೆ, ಕವಿತಾ ರಚನೆ, ಉರ್ದು ಪ್ರಬಂಧ, ಇಂಗ್ಲಿಷ್ ಪ್ರಬಂಧ, ಸಂಸ್ಕೃತ ಪ್ರಬಂಧ, ಹಿಂದಿ ಪ್ರಬಂಧ, ಮಲೆಯಾಳ ಪ್ರಬಂಧ ಕಂಠಪಾಠ, ಸಂಸ್ಕೃತ ಕಂಠಪಾಠ, ಶಾಸ್ತ್ರಿಯ ಸಂಗೀತ, ಮಲಯಾಳ ಲಘು ಸಂಗೀತ, ಕನ್ನಡ ಹಾಗೂ ಸಂಸ್ಕೃತ ಕಥಾ ಹಾಗೂ ಕವಿತಾ ರಚನಾ ಲಲಿತಗಾನಂ, ಕೇರಳ ನಡನಮ್ ಮುಂತಾದ ಸ್ಪರ್ಧೆಗಳಲ್ಲಿ ಎ ಗ್ರೇಡ್‌ನೆÆಂದಿಗೆ ಪ್ರಥಮ ಸ್ಥಾನ ಗಳಿಸಿತು. ೧೨೦ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಈ ಮೊದಲು ೨೦೧೮ ರಲ್ಲಿ ಕಾಟುಕುಕ್ಕೆ ಶಾಲೆಗೆ ಚಾಂಪಿಯನ್ ಪಟ್ಟ ಲಭಿಸಿತ್ತು. ವಿದ್ಯಾರ್ಥಿಗಳ ವಿಜಯಕ್ಕೆ ಮ್ಯಾನೇಜರ್ ಮಿತ್ತೂರು ಪುರುಷೋತ್ತಮ ಭಟ್, ವಿದ್ಯಾವರ್ಧಕ ಸಂಘದ ಅಧ್ಯಕ್ಷÀ ಸಂಜೀವ ರೈ, ಪ್ರಾಂಶುಪಾಲರಾದ ಪದ್ಮನಾಭ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರು,ಪಿ,ಟಿ,ಎ ಅಧ್ಯಕ್ಷರು ಅಭಿನಂದಿಸಿದರು. ಅಧ್ಯಾಪಕ ಬಾಲಕೃಷ್ಣ, ರಾಜೇಶ್ ಸಿ.ಎಚ್, ಕೃಷ್ಣ ಕುಮಾರಿ, ರಮಣಿ ಎಂ.ಎಸ್, ಸರಸ್ವತಿ ಪ್ರಸನ್ನ, ವಾಣಿಶ್ರೀ, ವಾಣಿ ಕೆ, ಸುರೇಶ್, ಗೋವಿಂದನ್ ನಂಬೂದಿರಿ,ಶ್ರೀವಿದ್ಯಾ, ಸಂದೀಪ್, ಈಶ್ವರ ನಾಯಕ್, ಮಹೇಶ್ ಏತಡ್ಕ ,ಶ್ರೀರಾಜ್, ಕೃಷ್ಣನ್ ನಂಬೂದಿರಿ,ಆಫೀಸ್ ಸಹಾಯಕ ಸಂಕಪ್ಪ ನೇತೃತ್ವ ನೀಡಿದರು.