ಕುಂಬಳೆ: ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ; ಸ್ಥಳೀಯಾಡಳಿತ ಚುನಾವಣೆಯಲ್ಲಿ ತಿರುಗೇಟು ಸಾಧ್ಯತೆ ಪರಿಹಾರಕ್ಕೆ ಮಂಡಲ ಅಧ್ಯಕ್ಷರಿಂದ ಜಿಲ್ಲಾ ನಾಯಕತ್ವಕ್ಕೆ ಮನವಿ
ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ನಲ್ಲಿ ಸೃಷ್ಟಿಯಾದ ಭಿನ್ನಾಭಿಪ್ರಾಯವನ್ನು ಶೀಘ್ರ ಪರಿಹರಿಸದಿದ್ದಲ್ಲಿ ಮುಂದೆ ನಡೆಯಲಿರುವ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕುಂಬಳೆಯಲ್ಲಿ ಅದು ತೀವ್ರ ತಿರುಗೇಟಾಗಿ ಪರಿಣಮಿಸಲಿದೆ ಯೆಂದು ಕಾಂಗ್ರೆಸ್ ಮಂಡಲ ಅಧ್ಯಕ್ಷ ರವಿ ಪೂಜಾರಿ ಕಾಂಗ್ರೆಸ್ ಜಿಲ್ಲಾ ನಾಯಕತ್ವಕ್ಕೆ ತಿಳಿಸಿದ್ದಾರೆ.
ಬ್ಯಾಂಕ್ ಚುನಾವಣೆಯಲ್ಲಿ ಉಂಟಾದ ಸೋಲಿನಲ್ಲಿ ಎಲ್ಲರಿಗೂ ಹೊಣೆಗಾರಿಕೆಯಿದೆ. ಇಂಡಿಯಾ ಒಕ್ಕೂಟವಾಗಿ ಕುಂಬಳೆ ಸೇವಾ ಸಹಕಾರಿ ಒಕ್ಕೂಟ ಎಂಬ ಹೆಸರಲ್ಲಿ ಸ್ಪರ್ಧಾ ಕಣಕ್ಕಿಳಿಯಲು ಎಲ್ಲ್ಲರೂ ಒಗ್ಗಟ್ಟಿನಿಂದ ನಿರ್ಧರಿಸಿದ್ದರು. ಸಭೆಯಲ್ಲಿ ಯಾರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ ಈ ನಿರ್ಧಾರವನ್ನು ಹಲವು ನೇತಾರರು ಉಲ್ಲಂಘಿಸಿದ್ದಾರೆ. ಬ್ಯಾಂಕ್ನಲ್ಲಿ ಸದಸ್ಯರಾದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಮತ ಚಲಾಯಿಸಿದ್ದಾರೆ. ಸಿಪಿಎಂನಲ್ಲೂ ಗುಂಪುಗಾರಿಕೆ ಉಂಟಾಗಿದೆ. ಇದೆಲ್ಲಾ ಒಕ್ಕೂಟದ ಸೋಲಿಗೆ ಕಾರಣವಾಯಿತೆಂದು ರವಿ ಪೂಜಾರಿ ತಿಳಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ನಲ್ಲಿ ಸೃಷ್ಟಿಯಾದ ಭಿನ್ನಾಭಿಪ್ರಾಯ ಪರಿಹರಿಸಲು ಜಿಲ್ಲಾ ಸಮಿತಿ ತುರ್ತಾಗಿ ಮಧ್ಯಪ್ರವೇಶಿಸಬೇಕೆಂದು ಅವರು ಆಗ್ರಹಪಟ್ಟಿದ್ದಾರೆ.