ಕುಂಬಳೆ ಜನರಲ್ ವರ್ಕರ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ನೂತನ ಕಚೇರಿ ನಾಳೆ ಉದ್ಘಾಟನೆ
ಕುಂಬಳೆ: ಕುಂಬಳೆ ಜನರಲ್ ವರ್ಕರ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಚೇರಿಯ ಉದ್ಘಾಟನೆ ಕುಂಬಳೆ ಪೇಟೆಯಲ್ಲಿರುವ ನಂದಗೋಕುಲ ಕಟ್ಟಡದಲ್ಲಿ ನಾಳೆ ನಡೆಯಲಿದೆ.
ನಾಳೆ ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಸಹಕಾರಿ ಖಾತೆ ಸಚಿವ ವಿ.ಎನ್. ವಾಸವನ್ ನೂತನ ಕಚೇರಿಯನ್ನು ಉದ್ಘಾಟಿಸುವರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಶಾಸಕ ಸಿ.ಎಚ್. ಕುಂಞಂಬು ಮುಖ್ಯ ಅತಿಥಿಯಾಗಿರುವರು. ಕೋ-ಆಪರೇಟಿವ್ ಸೊಸೈಟಿಗಳ ಜೋಯಿಂಟ್ ರಿಜಿಸ್ಟ್ರಾರ್ ಲಸಿತ ಕೆ ಫಿಕ್ಸೆಡ್ ಡೆಪಾಸಿಟ್ ಪಡೆದುಕೊಳ್ಳುವರು. ಅಧಿಕಾರಿಗಳು, ಜನಪ್ರತಿನಿಧಿಗಳ ಸಹಿತ ಹಲವರು ಭಾಗವಹಿಸುವರು.