ಕುಂಬಳೆ ಪಂಚಾಯತ್ನಿಂದ ಲಪಟಾಯಿಸಿದ 11 ಲಕ್ಷ ರೂ. ಮರು ಪಾವತಿ: ಅಕೌಂಟೆಂಟ್ ವಿರುದ್ಧ ತನಿಖೆಗೆ ಪಂ. ಅಧ್ಯಕ್ಷೆ ಒತ್ತಾಯ
ಕುಂಬಳೆ: ಕುಂಬಳೆ ಪಂಚಾಯತ್ ಅಕೌಂಟೆಂಟ್ ಲಪಟಾಯಿಸಿದ ಲಕ್ಷಾಂತರ ರೂಪಾಯಿಗಳನ್ನು ಮರು ಪಾವತಿಸಲಾಯಿತು. ಇದೇ ವೇಳೆ ಪಂಚಾಯತ್ ಫಂಡ್ನಿಂದ 11 ಲಕ್ಷ ರೂಪಾಯಿ ಲಪಟಾಯಿಸಲಾದ ಅಕೌಂಟೆಂಟ್ ರಮೇಶನ್ ವಿರುದ್ಧ ಸಮಗ್ರ ತನಿಖೆ ನಡೆಸಬೇಕೆಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರ ಯೂಸಫ್ ಆಗ್ರಹಪಟ್ಟಿದ್ದಾರೆ. ಘಟನೆ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಯುತ್ತಿರುವಾಗಲೇ ಎಲ್ಲಾ ಮೊತ್ತವನ್ನೂ ಮರು ಪಾವತಿಸಿರುವುದಾಗಿ ಅವರು ತಿಳಿಸಿದ್ದಾರೆ.
ಕ್ರಿಮಿನಲ್ ಸ್ವಭಾವವುಳ್ಳ ರಮೇಶನ್ರನ್ನು ದೂಷಿಸಿ ಹೇಳಿಕೆ ನೀಡಲು ಅವರ ಸಂಘಟನೆ ಸಿದ್ಧರಾ ಗದಿರುವುದು ಖಂಡನೀಯ ಎಂದೂ ಯು.ಪಿ. ತಾಹಿರ ತಿಳಿಸಿದ್ದಾರೆ. ಅಭಿವೃದ್ಧಿರಂಗದಲ್ಲಿ ಮುಂಚೂ ಣಿಯಲ್ಲಿರುವ ಪಂ ಚಾಯತ್ಗೆ ಕಳಂಕವುಂಟುಮಾಡಲು ಕೆಲವು ನೌಕರರು ಪ್ರಯತ್ನಿಸುತ್ತಿದ್ದಾರೆಂದೂ ಅವರು ಆರೋಪಿಸಿದ್ದಾರೆ.