ಕುಂಬಳೆ ಪಂಚಾಯತ್ ಫಂಡ್ ವಂಚನೆ: 9 ಲಕ್ಷ ರೂ. 2 ಗಡುಗಳಾಗಿ ಮರು ಪಾವತಿ; 2ಲಕ್ಷ ರೂ. ಇಂದು ಪಾವತಿ ಸಾಧ್ಯತೆ
ಕುಂಬಳೆ: ಕುಂಬಳೆ ಪಂಚಾಯತ್ ಫಂಡ್‌ನಿಂದ ಲಪಟಾಯಿಸಿದ ಲಕ್ಷಾಂ ತರ ರೂಪಾಯಿಗಳಲ್ಲಿ 9 ಲಕ್ಷ ರೂಪಾ ಯಿಗಳನ್ನು ಎರಡು ಗಡುಗಳಾಗಿ ಮರಳಿ ಪಾವತಿಸಲಾಗಿದೆ. ಎರಡು ಲಕ್ಷ ರೂಪಾ ಯಿಗಳನ್ನು ಇಂದು ಪಂಚಾಯತ್ ಫಂಡ್‌ಗೆ ಮರು ಪಾವತಿಸಲು ಉದ್ದೇಶಿಸಿ ರುವುದಾಗಿ ಹೇಳಲಾಗುತ್ತಿದೆ. ಆ ಮೊತ್ತ ಕೂಡಾ ಖಾತೆಗೆ ತಲುಪಿದರೆ ಪತ್ರಿಕಾ ಗೋಷ್ಠಿ ಕರೆದು ಪಂಚಾಯತ್ ಫಂಡ್ ನಿಂದ ಹಣ ನಷ್ಟಗೊಂಡಿಲ್ಲವೆಂದೂ, ಎಣಿಸುವಾಗ ಉಂಟಾದ ಲೋಪ ಈ ಬಗ್ಗೆ ಸಂಶಯಕ್ಕೆಡೆಮಾಡಿರುವುದಾಗಿ ತಿಳಿಸಲು ಆಡಳಿತ ಪಕ್ಷ ಹಾಗೂ ಪಂಚಾಯತ್‌ನ ಪದಾಧಿಕಾರಿಗಳು ಕಾದು ನಿಂತಿದ್ದಾರೆಂದು ಹೇಳಲಾಗುತ್ತಿದೆ. ಪಂಚಾಯತ್ ಫಂಡ್‌ನಿಂದ ಹಣ ಲಪಟಾಯಿಸಿದ ಬಗ್ಗೆ ವರದಿಯನ್ನು ಜುಲೈ 23ರಂದು ಕಾರವಲ್ ಮೀಡಿಯ ವರದಿ ಮಾಡಿತ್ತು. 24ರಂದು ಸಂಜೆ ಪಂಚಾಯತ್ ಫಂಡ್ ವಂಚನೆಯ ಕುರಿತು ಪಂ. ಅಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯ ಯೂಸಫ್ ಉಳುವಾರು ಪತ್ರಿಕಾಗೋಷ್ಠಿ ನಡೆಸಿದ್ದರು. ಕುಂಬಳೆ ಪ್ರೆಸ್ ಫಾರಂನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ 11 ಲಕ್ಷ ರೂಪಾಯಿಗಳನ್ನು ಪಂಚಾಯತ್ ಫಂಡ್‌ನಿಂದ ಲಪಟಾಯಿಸಿರುವುದಾಗಿ ಅವರು ಬಹಿರಂಗ ಪಡಿಸಿದ್ದರು. ಆದರೆ ಅದರ ಮರುದಿನ ಈ ವಿಷಯದಲ್ಲಿ ನಡೆದ ಪಂಚಾಯತ್ ಆಡಳಿತ ಸಮಿತಿ ತುರ್ತು ಸಭೆಯಲ್ಲಿ 5 ಲಕ್ಷ ರೂಪಾಯಿ ಗಳನ್ನು ಮಾತ್ರ ಲಪಟಾಯಿಸಿರುವುದಾಗಿ ಪಂಚಾಯತ್ ಅಧ್ಯಕ್ಷೆ ತಿಳಿಸಿದ್ದರು.
ಒಂದು ದಿನದಲ್ಲಿ ಲಕ್ಷಾಂತರ ರೂಪಾಯಿಗಳ ವ್ಯತ್ಯಾಸ ಹೇಗೆ ಬಂತೆಂದು ವಿರೋಧ ಪಕ್ಷ ಸಭೆಯಲ್ಲಿ ಪ್ರಶ್ನಿಸಿದ್ದರೂ ಸರಿಯಾದ ಉತ್ತರ ಲಭಿಸಿ ರಲಿಲ್ಲ. ಆದರೆ ಪಂಚಾಯತ್ ಆಡಳಿತ ಸಮಿತಿ ತುರ್ತು ಸಭೆ ನಡೆಯುವುದರ ಮುಂಚೆ ಲಪಟಾಯಿಸಿದ ಮೊತ್ತದಲ್ಲಿ ಐದು ಲಕ್ಷ ರೂಪಾಯಿ ಪಂಚಾಯತ್ ಫಂಡ್‌ಗೆ ಮರುಪಾವತಿಸಲಾಗಿತ್ತು. ಕಳೆದ ಶುಕ್ರವಾರ 4 ಲಕ್ಷ ರೂಪಾಯಿಗಳನ್ನು ಮತ್ತೆ ಪಂಚಾಯತ್‌ನ ಖಾತೆಗೆ ಪಾವತಿ ಸಲಾಗಿದೆ. ಈ ಮೊತ್ತವನ್ನು ಪಾವತಿಸಿ ದವರು ಯಾರೆಂದು ವಿಜಿಲೆನ್ಸ್ ತನಿಖೆ ನಡೆಸಿದರೆ ಪತ್ತೆಹಚ್ಚಬಹುದಾಗಿದೆ. ಎಲ್ಲಿಂದ ಯಾವಾಗ ಹಣ ಪಾವತಿ ಲಾಗಿದೆ ಎಂದು ತನಿಖೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. ಲಪಟಾಯಿಸಿದ ಬಾಕಿ ಮೊತ್ತವಾದ 2 ಲಕ್ಷ ರೂಪಾ ಯಿಗಳು ಇಂದು ಮರುಪಾವತಿಯಾ ಗಲಿದೆ ಎಂದು ಲೀಗ್ ನಾಯಕತ್ವಕ್ಕೆ ಸಂಬಂಧಪಟ್ಟ ಮೂಲಗಳು ತಿಳಿಸಿವೆ. ಸ್ಥಾಯಿ ಸಮಿತಿ ಅಧ್ಯಕ್ಷರ, ಸಿಪಿಎಂ, ಎಸ್‌ಡಿಪಿಐ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಪಂಚಾಯತ್ ಫಂಡ್ ವಂಚನೆ ಕುರಿತು ತನಿಖೆ ನಡೆಸಬೇಕೆಂದು ಪಂಚಾಯತ್ ಅಧ್ಯಕ್ಷೆ ವಿಜಿಲೆನ್ಸ್ ಡೆಪ್ಯುಟಿ ಪೊಲೀಸ್ ಸುಪರಿಂಟೆಂಡೆಂಟ್‌ರಲ್ಲಿ ಆಗ್ರಹಪಟ್ಟಿದ್ದಾರೆ.
ತನಿಖೆಯನ್ನು ಸರಳಗೊಳಿಸಲು ಹಾಗೂ ತನಿಖೆಯ ಮುಂಚೆ ಅಧ್ಯಕ್ಷೆ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಹೊರತುಪಡಿಸಲು ಈ ರೀತಿ ಹಣವನ್ನು ತರಾತುರಿಯಲ್ಲಿ ಮರಳಿ ಪಾವತಿಸಲಾಗಿದೆ ಎಂದು ಸಂಶಯಿಸಲಾಗುತ್ತಿದೆ. ಮಾತ್ರವಲ್ಲ ವಿಜಿಲೆನ್ಸ್ ತನಿಖೆ ನಡೆದರೆ ಇತರ ಹಲವು ವಂಚನೆಗಳು ಕೂಡಾ ಬಹಿರಂಗಗೊಳ್ಳಲಿದೆಯೆಂಬ ಆತಂಕ ಆಡಳಿತಕ್ಕೆ ನೇತೃತ್ವ ನೀಡುವವರು ಹಾಗೂ ಪಕ್ಷದ ನಾಯಕತ್ವಕ್ಕೆ ಇದೆ ಎಂದು ಹೇಳಲಾಗುತ್ತಿದೆ.