ಕುಂಬಳೆ: ಕುಂಬಳೆ ಪೇಟೆಯಲ್ಲಿ ನಿನ್ನೆ ಸಂಜೆ ಎರಡು ತಂಡಗಳು ಘರ್ಷಣೆಯಲ್ಲಿ ತೊಡಗಿಕೊಂಡಿದ್ದು ಕೂಡಲೇ ತಲುಪಿದ ಪೊಲೀಸರು ತಂಡಗಳನ್ನು ಹೊಡೆದೋಡಿಸಿದ ಘಟನೆ ನಡೆದಿದೆ. ಪೇಟೆಯ ಆಟೋಸ್ಟಾಂಡ್ ಸಮೀಪ ಎರಡು ತಂಡಗಳು ವಾಗ್ವಾದಕ್ಕಿಳಿದು ಬಳಿಕ ಹೊಡೆದಾಟಕ್ಕೆ ಮುಂದಾಗಿವೆ ಎನ್ನಲಾಗಿದೆ. ಘಟನೆಗೆ ಸಂಬಧಿಸಿ ಆರು ಮಂದಿ ವಿರುದ್ಧ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ.