ಕುಂಬಳೆ ಪೇಟೆಯಲ್ಲಿ ಚರಂಡಿಗಳು ಸೆಪ್ಟಿಕ್ ಟ್ಯಾಂಕ್: ದುರ್ವಾಸನೆ ಅಸಹನೀಯ
ಕುಂಬಳೆ: ಕುಂಬಳೆ ಪೇಟೆಯ ವ್ಯಾಪಾರ ಸಂಸ್ಥೆಗಳು ಸೇರಿದಂತೆ ಸಕಲ ಕಟ್ಟಡಗಳ ಸೆಪ್ಟಿಕ್ ಟ್ಯಾಂಕ್ ಪೇಟೆಯ ಚರಂಡಿಗಳಾಗಿವೆ ಎಂದು ಪಂಚಾಯತ್ ಅಧಿಕಾರಿಗಳಿಗೆ ಖಚಿತವಾಯಿತು.
ಕುಂಬಳೆ ಮುಳ್ಳೇರಿಯ ಕೆ.ಎಸ್.ಟಿ.ಪಿ ರಸ್ತೆಯ ಡ್ರೈನೇಜ್ ಕರಾರುದಾರರು ಪೂರ್ತಿಗೊಳಿಸದಿರುವುದು ಇದಕ್ಕಾಗಿಯಾಗಿದೆ. ಚರಂಡಿ ಶುಚೀಕರಣವೆಂಬ ವಿವಿಧ ಕಡೆಗಳಿಂದ ಬೇಡಿಕೆ ಬಂದಾಗ ಪಂಚಾಯತ್ ಅಧಿಕಾರಿಗಳು ರಸ್ತೆ ನಿರ್ಮಾಣದೊಂದಿಗೆ ಚರ್ಚೆ ನಡೆಸಿದ್ದರು. ಚರ್ಚೆಯ ಆಧಾರದಲ್ಲಿ ಚರಂಡಿಗಳನ್ನು ಶುಚೀಕರಿಸಲು ಆರಂಭಿಸಿದಾಗ ಚರಂಡಿಯಲ್ಲಿ ಸಂಪೂರ್ಣ ಪಾಯಿಖಾನೆ ಮಲಿನಜಲ, ರಸ್ತೆ ಬದಿಯ ಎಲ್ಲಾ ಕಟ್ಟಡಗಳಿಂದಿರುವ ಮಲಿನ ಜಲ ಪೈಪನ್ನು ಚರಂಡಿಗೆ ಹರಿಯಬಿಟ್ಟಿರುವುದು ಪತ್ತೆಹಚ್ಚಲಾಗಿದೆ.
ಚರಂಡಿ ಕಾರ್ಮಿಕರು ಮನುಷ್ಯರಾದ ಕಾರಣ ಅಸಹನೀಯವಾದ ದುರ್ವಾಸನೆಯಿಂದಾಗಿ ಹೇಗೆ ಕೆಲಸ ನಿರ್ವಹಿಸುವುದೆಂದು ಅವರು ಪಂಚಾಯತ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ಚರಂಡಿಯನ್ನು ಪರಿಶೀಲಿಸಿದ ಅಧಿಕಾರಿಗಳು ವ್ಯಾಪಾರ ಸಂಸ್ಥೆಗಳಿಗೆ, ಮನೆಗಳಿಗೆ, ಇತರ ಕಟ್ಟಡಗಳಿಗೂ ಮಲಿನ ಜಲ – ಪಾಯಿಖಾನೆ ತ್ಯಾಜ್ಯವನ್ನು ಸಂಸ್ಕರಿಸಲು ಅವರ ಸ್ವಂತ ಸ್ಥಳದಲ್ಲಿ ವ್ಯವಸ್ಥೆ ಮಾಡಲು ನಿರ್ದೇಶಿಸಿದರು. ಆದರೆ ಈ ನಿರ್ದೇಶ ಯಾವಾಗ ಜ್ಯಾರಿಯಾಗ ಬಹುದೆಂದು ನಿರ್ದೇಶಿಸಿದವರಿಗೂ, ಕೇಳಿದವರಿಗೂ ಖಚಿತವಿಲ್ಲವೆಂದು ಆರೋಪವಿದೆ. ಅದುವರೆಗೆ ಬಸ್ ನಿಲ್ದಾಣ ಪರಿಸರದಲ್ಲಿ ಪ್ರಯಾಣಿಕರು ದುರ್ವಾಸನೆಯನ್ನು ಆಘ್ರಾಣಿಸಲು ನಿರ್ಬಂಧಿತರಾಗಿದ್ದಾರೆಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.