ಕುಂಬಳೆ ಬ್ಯಾಂಕ್ ಕಳವು: ಸಿಸಿ ಟಿವಿಯಲ್ಲಿ ಇಬ್ಬರ ದೃಶ್ಯ ಪತ್ತೆ

ಕುಂಬಳೆ: ಕುಂಬಳೆ ಸೇವಾ ಸಹಕಾರಿ ಬ್ಯಾಂಕ್‌ನ ಪೆರುವಾಡ್  ಶಾಖೆಯಲ್ಲಿ ನಡೆದ ಕಳವು ಯತ್ನ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿ ಸಿದ್ದಾರೆ. ಇದೇ ವೇಳೆ ಕಳ್ಳರದ್ದೆಂದು ಸಂಶ ಯಿಸಲಾದ ಎರಡು ಮಂದಿಯ ದೃಶ್ಯ ಗಳು ಬ್ಯಾಂಕ್‌ನ  ಸಿ.ಸಿ ಟಿ.ವಿ ಕ್ಯಾಮರಾ ದಿಂದ ಪೊಲೀಸರಿಗೆ ಲಭಿಸಿದೆ.

ಇದೇ ವೇಳೆ ಮೂರು ಬೆರಳಚ್ಚುಗಳು ಕೂಡಾ ಲಭಿಸಿರುತ್ತದೆ. ಇವುಗಳ ಆಧಾರದಲ್ಲಿ ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುವು ದೆಂದು ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಜೈಲು ಶಿಕ್ಷೆ ಮುಗಿದು ಬಿಡುಗಡೆಗೊಂಡವರು ಹಾಗೂ ಅಂತಾರಾಜ್ಯ ಕಳ್ಳರ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.

ಕಳೆದ ಶನಿವಾರ  ರಾತ್ರಿ ಬ್ಯಾಂಕ್‌ಗೆ ಕಳ್ಳರು ನುಗ್ಗಿದ್ದಾರೆ. ಕಿಟಿಕಿಯ ಸರಳು ಮುರಿದು ಕಳ್ಳರು ಒಳನುಗ್ಗಿದ್ದಾರೆ. ಆದರೆ ಯಾವುದೇ ಸೊತ್ತುಗಳು ಕಳವಿಗೀಡಾದ ಬಗ್ಗೆ ತಿಳಿದುಬಂದಿಲ್ಲ. ಇಬ್ಬರು ವ್ಯಕ್ತಿಗಳು ಸಿ.ಸಿ ಕ್ಯಾಮರಾದ  ದೃಶ್ಯದಲ್ಲಿದ್ದಾರೆ. ಆ ವ್ಯಕ್ತಿಗಳು ಯಾರೆಂಬ ಬಗ್ಗೆ ತಿಳಿಯಲು ಪೊಲೀಸರು ಕ್ರಮ ಆರಂಭಿಸಿದ್ದಾರೆ.

You cannot copy contents of this page