ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಲ್ಲೂ ಇ.ಡಿ ತನಿಖೆಗೆ ಸಾಧ್ಯತೆ
ಕುಂಬಳೆ: ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದಲ್ಲಿ ಕೇಂದ್ರ ಆರ್ಥಿಕ ಅಪರಾಧ ತನಿಖಾ ವಿಭಾಗ (ಇ.ಡಿ) ತನಿಖೆ ನಡೆಸಲಿದೆ ಎಂಬ ಸೂಚನೆ ಲಭಿಸಿದೆ. ಮರ್ಚೆಂಟ್ಸ್ ವೆಲ್ಫೇರ್ ಸಹಕಾರಿ ಸಂಘದ ಮರೆಯಲ್ಲಿ ಗಂಭೀರ ಆರ್ಥಿಕ ಅಪರಾಧಗಳು ಸೊಸೈಟಿಯಲ್ಲಿ ಹಲವು ಕಾಲದಿಂದ ನಡೆಯುತ್ತಿರುವುದಾಗಿ ಬ್ಯಾಂಕ್ನ ಡೈರೆಕ್ಟರ್ ಆಗಿದ್ದ ವಿಕ್ರಮ್ ಪೈ ಇ.ಡಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ವ್ಯಾಪಾರಿಗಳ ಹಾಗೂ ವ್ಯಾಪಾರ ಸಂಸ್ಥೆಗಳ ಕ್ಷೇಮ ಹಾಗೂ ಅಭಿವೃದ್ಧಿ ಯನ್ನು ಗುರಿಯಿರಿಸಿ ಸ್ಥಾಪಿಸಿದ ಕುಂಬಳೆ ಮರ್ಚೆಂಟ್ಸ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿ ಕುಂಬಳೆಯ ಕಟ್ಟಡ ಮಾಲಕರ ಹಿತಾಸಕ್ತಿಯನ್ನು ಸಂರಕ್ಷಿಸುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೆಚ್ಚಿನ ಕಟ್ಟಡ ಮಾಲಕರಿಗೂ 10ಕ್ಕಿಂತ ಹೆಚ್ಚು ಸೇವಿಂಗ್ಸ್ ಬ್ಯಾಂಕ್ ಅಕೌಂ ಟ್ಗಳು ಸಂಘದಲ್ಲಿ ಇದೆ ಎಂದೂ ದೂರಿನಲ್ಲಿ ಹೇಳಲಾಗಿದೆ. ಇವರ ಕಟ್ಟಡಗಳ ಬಾಡಿಗೆಯನ್ನು ಬಾಡಿಗೆದಾ ರರು ಈ ಖಾತೆ ನಂಬ್ರಗಳಲ್ಲಿ ಠೇವಣಿ ಇರಿಸುತ್ತಿದ್ದಾರೆ. ಈ ಮೊತ್ತವನ್ನು ಬಡ್ಡಿ ಸಹಿತ ವರ್ಷಕ್ಕೊಮ್ಮೆ ಕಟ್ಟಡ ಮಾಲಕರು 1,90,000 ಲೆಕ್ಕಾಚಾರದಲ್ಲಿ ಖಾತೆಗಳಿಂದ ಒಟ್ಟಿಗೆ ಹಿಂಪಡೆಯು ತ್ತಿದ್ದಾರೆ. ಇದರಿಂದ ಕಟ್ಟಡ ಬಾಡಿಗೆಗಿ ರುವ ಜಿಎಸ್ಟಿ ಕೂಡಾ ಪಂಚಾ ಯತ್ಗಳಿಗೆ ಲಭಿಸುತ್ತಿಲ್ಲ. ಈ ಮೊತ್ತಕ್ಕೆ ಆದಾಯ ತೆರಿಗೆಯನ್ನೂ ನೀಡುತ್ತಿಲ್ಲವೆಂದು ದೂರಲಾಗಿದೆ. ಈ ರೀತಿಯಲ್ಲಿ ನಡೆಯುವ ಕಾನೂನು ವಿರೋಧಿ ಕ್ರಮಗಳ ಹೊರತು ಸಾಲ ವಿತರಣೆಯಲ್ಲೂ ಭಾರೀ ವಂಚನೆಗಳು ನಡೆಯುತ್ತಿರುವುದಾಗಿ ಹಲವರು ಸಂಘದ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ. ಇತ್ತೀಚೆಗೆ ಸೊಸೈಟಿ ಯನ್ನು ಬೇರೊಂದು ಕಟ್ಟಡಕ್ಕೆ ಸ್ಥಳಾಂ ತರಿಸಲು ಪ್ರಯತ್ನಿಸಿರುವುದಾಗಿಯೂ, ಅದರ ಮರೆಯಲ್ಲೂ ಭಾರೀ ವಂಚನೆ ನಡೆದಿರುವುದಾಗಿ ದೂರಲಾಗಿದೆ. 12,000 ರೂಪಾಯಿ ಬಾಡಿಗೆಗೆ 1000 ಚದರ ಅಡಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಸೊಸೈಟಿಗಾಗಿ 600 ಚದರ ಅಡಿ ವಿಸ್ತೀರ್ಣದ ಬೇ ರೊಂದು ಕಟ್ಟಡವನ್ನು 18,000 ರೂಪಾಯಿಗೆ ಬಾಡಿಗೆಗೆ ಪಡೆದಿರುವು ದಾಗಿ ಆರೋಪಿಸಲಾಗಿದೆ. ಅದರೊಳಗೆ ಲಾಕರ್ ಸ್ಥಾಪಿಸುವ ಹೆಸರಲ್ಲೂ ಭಾರೀ ವಂಚನೆಗೆ ಪ್ರಯತ್ನಿಸುತ್ತಿರುವುದಾಗಿ ದೂರಲಾಗಿದೆ. ಬ್ಯಾಂಕ್ನಲ್ಲಿ ಆರಂಭದಲ್ಲಿ ನಡೆದ ಲಕ್ಷಾಂತರ ರೂಪಾಯಿಗಳ ವಂಚನೆಯನ್ನು ಬ್ಯಾಂಕ್ ಸೆಕ್ರೆಟರಿಯ ತಲೆಮೇಲೆ ಹೊರಿಸಿ ಅವರನ್ನು ಅಮಾನತುಗೊಳಿಸಲಾಗಿತ್ತು. ಅದರ ವಿರುದ್ಧ 10 ವರ್ಷ ಕಾಲ ಹೈಕೋರ್ಟ್ ವರೆಗೆ ಸೆಕ್ರೆಟರಿ ಕೇಸಿನೊಂದಿಗೆ ನಡೆದಿದ್ದು ಕೊನೆಗೆ 10 ವರ್ಷದ ವೇತನವನ್ನು ಒಟ್ಟಿಗೆ ಅವರಿಗೆ ನೀಡುವಂತೆ ತೀರ್ಪು ನೀಡಲಾಗಿತ್ತು.
25 ವರ್ಷ ಕಾಲ ಬ್ಯಾಂಕ್ನ ಅಧ್ಯಕ್ಷರಾಗಿದ್ದ ಎಂ. ಅಬ್ಬಾಸ್ರನ್ನು ಸಂಘದಲ್ಲಿ ನಡೆದ ವಂಚನೆಗಳ ಹಿನ್ನೆಲೆಯಲ್ಲಿ ಸಹಕಾರಿ ಇಲಾಖೆ ಅಧ್ಯಕ್ಷ ಸ್ಥಾನದಿಂದ ಈ ಹಿಂದೆ ಅಮಾನತುಗೊಳಿಸಿತ್ತು. ಮುಸ್ಲಿಂ ಲೀಗ್ ಹಾಗೂ ವ್ಯಾಪಾರಿ ಸಂಘಟನೆಯ ನೇತಾರನಾದ ಅವರು ಅಧಿಕಾರ ಕಳೆದುಕೊಂಡ ಬಳಿಕ ಲೀಗ್ ನೇತಾರನಾದ ಸತ್ತಾರ್ ಆರಿಕ್ಕಾಡಿ ಸೊಸೈಟಿಯ ಅಧ್ಯಕ್ಷರಾಗಿದ್ದರು. ಈ ಆಡಳಿತ ಸಮಿತಿಯನ್ನು ಬಹುಮತ ನಷ್ಟಗೊಂಡ ಹಿನ್ನೆಲೆಯಲ್ಲಿ ಇತ್ತೀಚೆಗೆ ಸಹಕಾರಿ ಇಲಾಖೆ ಬರ್ಖಾಸ್ತುಗೊಳಿಸಿರುತ್ತದೆ.