ಕುಂಬಳೆ ಶಾಲೆ ಮೈದಾನ ಖಾಸಗಿ ಸಂಸ್ಥೆಗೆ: ನಾಗರಿಕರಿಂದ ವಿರೋಧ
ಕುಂಬಳೆ: ಕುಂಬಳೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗಾಂಧಿ ಮೈದಾನವನ್ನು ಕಣ್ಣೂರಿನ ಖಾಸಗಿ ಸಂಸ್ಥೆಗೆ ಒಂದು ವರ್ಷದ ಅವಧಿಗೆ ಒಪ್ಪಂದ ಪತ್ರ ನೀಡಿದ ಶಾಲೆಯ ಅಧಿಕೃತರು ಹಾಗೂ ಶಾಲೆಯ ರಕ್ಷಕ ಶಿಕ್ಷಕ ಸಂಘದ ವಿರುದ್ಧ ಕುಂಬಳೆಯ ನಾಗರಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ತಂಡಗಳು ಕ್ರಿಕೆಟ್, ಫುಟ್ಬಾಲ್, ಕಬಡ್ಡಿ ಪಂದ್ಯಾಟವನ್ನು ಆಯೋಜಿಸುತ್ತಿದ್ದಾರೆ.ಅದೇ ರೀತಿ ಕುಂಬಳೆ ಅಯ್ಯಪ್ಪ ಸಮಿತಿಯ ವತಿಯಿಂದ ಅಯ್ಯಪ್ಪ ದೀಪೋತ್ಸವ ನಡೆಯುತ್ತಿದೆ.ಈ ಸಂದರ್ಭದಲ್ಲಿ ಸ್ಥಳೀಯರನ್ನು ಪರಿಗಣಿಸದೆ ಕಣ್ಣೂರಿನ ಖಾಸಗಿ ಸಂಸ್ಥೆಗೆ ನೀಡಿದ ಒಪ್ಪಂದ ಪತ್ರವನ್ನು ಕೂಡಲೇ ರದ್ದು ಪಡಿಸಬೇಕೆಂದು ಕುಂಬಳೆಯ ನಾಗರಿಕರ ಹಾಗೂ ಕ್ರೀಡಾಭಿಮಾನಿಗಳ ಪರವಾಗಿ ಕುಂಬಳೆ ಶಾಲೆಯ ಅಧಿಕೃತರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೆ. ಸುಧಾಕರ ಕಾಮತ್À, ಸತೀಶ, ಸಮೀರ್, ಮನೋಜï ಕಂಚಿಕಟ್ಟೆ ಹಾಗೂ ರಾಜೇಂದ್ರ ಉಪಸ್ಥಿತರಿದ್ದರು.