ಕುಂಬ್ಡಾಜೆ ಪಂ. ಮಾಜಿ ಅಧ್ಯಕ್ಷೆ ನಿಧನ
ಕುಂಬ್ಡಾಜೆ: ಕುಂಬ್ಡಾಜೆ ಮಾಜಿ ಅಧ್ಯಕ್ಷೆ, ವನಿತಾ ಲೀಗ್ ಮುಖಂಡೆಯಾಗಿದ್ದ ಕರುವಲ್ತಡ್ಕ ನಿವಾಸಿ ಫಾತಿಮತ್ ಸುಹರ (60) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಶುಕ್ರವಾರ ರಾತ್ರಿ ಚೆರ್ಕಳದ ಆಸ್ಪತ್ರೆಯಲ್ಲಿ ಸಂಭವಿಸಿದೆ. 2015ರ ಚುನಾವಣೆಯಲ್ಲಿ ಗೆಲುವು ಸಾಧಿಸಿ ಇವರು ಪಂಚಾಯತ್ ಅಧ್ಯಕ್ಷೆಯಾಗಿದ್ದರು. ಮುಹಮ್ಮದ್- ಆಯಿಷಾ ದಂಪತಿ ಪುತ್ರಿಯಾಗಿರುವ ಇವರು ಸಹೋದರ ರಫೀಕ್, ಸಹೋದರಿ ನಬೀಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.