ಕುಂಬ್ಡಾಜೆ ಪಂ. ವಿರುದ್ಧ ಬಿಜೆಪಿ ಹೋರಾಟಕ್ಕೆ ಜಯ
ಬದಿಯಡ್ಕ: ಕುಂಬ್ಡಾಜೆ ಪಂಚಾ ಯತ್ ಯುಡಿಎಫ್ ಹಾಗೂ ಸಿಪಿಐ ದುರಾಡಳಿತದ ವಿರುದ್ಧ ಅಂಗನವಾಡಿ ಸಹಾಯಕಿ ನೇಮಕಾತಿಯಲ್ಲಿ ಬಿಜೆಪಿಯನ್ನು ಅವಗಣಿಸಿದುದರ ವಿರುದ್ಧ ಬಿಜೆಪಿ ಕುಂಬ್ಡಾಜೆ ಪಂಚಾಯ ತ್ ಸಮಿತಿ ನೇತೃತ್ವದಲ್ಲಿ ನಡೆದ ತುರ್ತು ಹೋರಾಟಕ್ಕೆ ಜಯ ಲಭಿಸಿದೆ. ಪ್ರಸ್ತುತ ಪ್ಯಾನೆಲ್‌ನಲ್ಲಿ ಬಿಜೆಪಿ ಪ್ರತಿನಿಧಿಯನ್ನು ಸೇರಿಸಿಕೊಂ ಡು ಸಂದರ್ಶನ ನಡೆಸುವುದೆಂದು ಲಿಖಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಯನ್ನು ಹಿಂತೆಗೆಯಲಾಯಿತು. ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯ ಅಧ್ಯಕ್ಷ ಹರೀಶ್ ಗೋಸಾಡ, ಪ್ರಧಾನ ಕಾರ್ಯದರ್ಶಿ ಶಶಿಧರ ತೆಕ್ಕೇಮೂಲೆ, ಮಂ ಡಲ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ, ಜಿಲ್ಲಾ ಪಂಚಾಯತ್ ಸದಸ್ಯೆ ಶೈಲಜಾ ಭಟ್, ಮಂಡಲ ಉಪಾಧ್ಯಕ್ಷ ಕೃಷ್ಣ ಶರ್ಮಾ ಜಿ, ಬ್ಲಾಕ್ ಪಂಚಾಯತ್ ಸದಸ್ಯೆ ಯಶೋದಾ ಎನ್, ನಳಿನಿಕೃಷ್ಣ,ವಾರ್ಡ್ ಪ್ರತಿನಿಧಿಗಳಾದ ಸುಂದರ ಮವ್ವಾರು ಸುನಿತಾ ಜೆ ರೈ, ಮೀನಾಕ್ಷಿ ಎಸ್, ಜಯಪ್ರಕಾಶ್ ಶೆಟ್ಟಿ, ಸುರೇಶ್ ಬಿ.ಕೆ. ರೋಶಿನಿ ಪೊಡಿಪ್ಪಳ್ಳ, ರಾಘವೇಂದ್ರ ಮೈಲ್ತೊಟ್ಟಿ, ವಾಸುದೇವಭಟ್ ಉಪ್ಪಂಗಳ, ಚಂದ್ರಹಾಸ ರೈ, ಜಯಂತಿ ಎಸ್ ರೈ, ಕೃಷ್ಣ ಚಕ್ಕುಡೇಲ್ ಮೊದಲಾದವರು ಭಾಗವಹಿಸಿದರು.