ಕುಖ್ಯಾತ ಕಳವು ಆರೋಪಿ ಸೆರೆ

ಕಾಸರಗೋಡು: ಕುಖ್ಯಾತ ಕಳವು ಆರೋಪಿ ತುರುತ್ತಿ ಮಟತ್ತಿಲ್ ಮಣಿ (46)ನನ್ನು ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ತೃಕ್ಕರಿಪುರ ಎಡಚ್ಚಾಕೈ, ಮಾಚಿಕ್ಕಾಟು ನಿವಾಸಿಯಾಗಿದ್ದಾನೆ ಬಂಧಿತ ಆರೋಪಿ. ಹೊಸದುರ್ಗ ಮತ್ತು ನೀಲೇಶ್ವರದ ಬಿಎಸ್‌ಎನ್‌ಎಲ್ ಎಕ್ಸ್‌ಚೇಂಜ್‌ನಿಂದ ೨ ಲಕ್ಷ ರೂ. ಮೌಲ್ಯದ ಬ್ಯಾಟರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page