ಕುಟುಂಬಶ್ರೀ ಸದಸ್ಯೆಯರಿಗೆ ಮರಳಿ ಶಾಲೆಗೆ ಕಾರ್ಯಕ್ರಮ
ಉಪ್ಪಳ: ಸಿ.ಡಿ.ಎಸ್ ಕುಟುಂ ಬಶ್ರೀಯ ಮರಳಿ ಶಾಲೆಗೆ ಎಂಬ ಕಾರ್ಯಕ್ರಮದಲ್ಲಿ ನೆರೆ ಕೆರೆ ಕೂಟದ ಸದಸ್ಯರಿಗೆ ನಿನ್ನೆ ಪೈವಳಿಕೆ ನಗರ ಶಾಲೆ ಯಲ್ಲಿ ತರಗತಿ ನಡೆಸಲಾಯಿತು. ಚಿಪ್ಪಾರ್, ಬೆರಿಪದವು, ಸುದೆಂಬಳ, ಸಜಂಕಿಲ ವಾರ್ಡ್ಗಳ ಕುಟುಂಬ ಶ್ರೀಯ ಸುಮಾರು ೮೫೦ ಮಂದಿ ತರಗತಿಯಲ್ಲಿ ಪಾಲ್ಗೊಂಡರು. ಪಂ ಚಾಯತ್ ವ್ಯಾಪ್ತಿಯ ನಾಲ್ಕನೇ ಬ್ಯಾಚ್ ನಿನ್ನೆ ನಡೆಸಲಾಗಿದೆ. ಪಂಚಾಯತ್ ಸದಸ್ಯೆ ಜಯಲಕ್ಷಿ÷್ಮÃ ಭಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಿತ್ರ, ಕದೀಜ, ಸುಜಾತ.ಬಿ ರೈ, ರೇಖ, ಜಯ ಲಕ್ಷಿ÷್ಮÃ ಭಟ್, ಸುಪ್ರಿತ, ಅಕ್ಷತ, ಮಂಗಳ, ಪುಷ್ಪ, ತಸ್ಮಿಯ, ದೀಕ್ಷ, ಶ್ವೇತ ತರಗತಿ ನೀಡಿದರು. ಸಿ.ಡಿ.ಎಸ್ ಚಯರ್ ಪರ್ಸನ್ ಚಂದ್ರಕಲಾ ಸ್ವಾಗತಿಸಿದರು.