ಕುಡಾಲ್ದ ಜವನೆರ್ ವಾಟ್ಸಪ್ ಗ್ರೂಪ್‌ನಿಂದ ವಿದ್ಯಾಜ್ಯೋತಿ ಪ್ರತಿಭಾ ಪುರಸ್ಕಾರ
ಪೈವಳಿಕೆ: ಕುಡಾಲ್ದ ಜವನೆರ್ ವಾಟ್ಸಪ್ ಗ್ರೂಪ್‌ನ ವಿದ್ಯಾಜ್ಯೋತಿ ನಗದು ಬಹುಮಾನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಚೇವಾರು ಶ್ರೀ ಶಾರದಾ ಎಯುಪಿ ಶಾಲೆಯಲ್ಲಿ ಜರಗಿತು. ಗ್ರೂಪ್‌ನ ಮುಖಂಡ ಉದ್ಯಮಿ ಕುಲಾಡುಗುತ್ತು ಗಣೇಶ ರೈ ಅಧ್ಯಕ್ಷತೆ ವಹಿಸಿದರು. ಪೈವಳಿಕೆ ಪಂಚಾಯತ್ ಸದಸ್ಯ ಅಬ್ದುಲ್ಲ ಉದ್ಘಾಟಿಸಿದರು. ಶಾಲೆಯ ಮುಖ್ಯ ಶಿಕ್ಷಕ ಶ್ಯಾಂ ಭಟ್, ಪ್ರಾಧ್ಯಾಪಕ ಸತೀಶ್ ಕುಮಾರ್ ಶೆಟ್ಟಿ, ಪತ್ರಕರ್ತ ಅಚ್ಯುತ ಚೇವಾರ್, ಕುಡಾಲು ವಾರ್ಡ್‌ನ ಜನಪ್ರತಿನಿಧಿ ಅಶೋಕ ಭಂಡಾರಿ ಅತಿಥಿಗಳಾಗಿ ಭಾಗವಹಿಸಿದರು. ಇದೇ ವೇಳೆ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಎಡಕ್ಕಾನ ಹಳ್ಳಕೋಡ್ಲು ಗೋವಿಂದ ಭಟ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಆಯ್ಕೆಯಾದ ಎ.ಆರ್. ಸುಬ್ಬಯ್ಯ ಕಟ್ಟೆ, ಕ್ರೀಡಾರಂಗದಲ್ಲಿ ಸಾಧನೆ ಮಾಡಿದ ದಿಲ್ಲು, ಸಾಮಾಜಿಕ ಮುಂದಾಳು ಬಿ.ಎ. ಖಾದರ್, ಗ್ರೂಪ್‌ನ ಅಧ್ಯಕ್ಷ ಗಣೇಶ್ ರೈ ಮೊದಲಾದವರನ್ನು ಸನ್ಮಾನಿಸಲಾಯಿತು. ರಾಜ್ಯ ಶಾಲಾ ಕಲೋತ್ಸವದಲ್ಲಿ ಹಿಂದಿ ಕಂಠ ಪಾಠ ವಿಭಾಗದಲ್ಲಿ ಎ ಗ್ರೇಡ್ ಪಡೆದ ಧರ್ಮತ್ತಡ್ಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಡೇನಿಕ ಪಹಲ್‌ಳನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪ್ಲಸ್ ಟು ವಿಭಾಗದಲ್ಲಿ ಎ ಪ್ಲಸ್ ಹಾಗೂ ಎಲ್‌ಎಸ್‌ಎಸ್, ಯುಎಸ್‌ಎಸ್ ಪರೀಕ್ಷೆಗಳಲ್ಲಿ ಸ್ಕಾಲರ್‌ಶಿಪ್‌ಗೆ ಅರ್ಹರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರೂಪ್‌ನ ಲಕ್ಷ್ಮೀಶ ಆಳ್ವ ಖತ್ತರ್, ಉದಯ ಶೆಟ್ಟಿ ಯುಎಇ, ನಾಗರಾಜ ಭಂಡಾರಿ ಯುಎಇ, ಬಶೀರ್ ಬಿ.ಎ, ಚಿದಾನಂದ ಶೆಟ್ಟಿ, ಸದಾಶಿವ ಭಂಡಾರಿ, ರಾಧಾಕೃಷ್ಣ ರೈ, ಜಯರಾಮ ಶೆಟ್ಟಿ, ಶಮಿತ ಉದಯ ಶೆಟ್ಟಿ, ಪುಷ್ಪ ಕಮಲಾಕ್ಷ ಉಪಸ್ಥಿತರಿದ್ದರು. ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿ, ಬಿ.ಎ. ಲತೀಫ್ ವಂದಿಸಿದರು.