ಕುಡಿಯುವ ನೀರಿಗೆ ಆತಂಕ ಬೇಡ: ನೀರು ಲಭ್ಯತೆಯನ್ನು ಖಚಿತಪಡಿಸಲಾಗುವುದು-ಜಿಲ್ಲಾಧಿಕಾರಿ
ಕಾಸರಗೋಡು: ಜಿಲ್ಲೆಯ ಸಂಪೂರ್ಣ ಜನರಿಗೆ ಕುಡಿಯುವ ನೀರು ಖಚಿತಪಡಿಸುವುದಕ್ಕೆ ಸ್ಥಳೀಯಾಡಳಿತ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನಿರ್ದೇಶ ನೀಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಆತಂಕಗೊಳ್ಳ ಬೇಕಾದ ಅಗತ್ಯವಿಲ್ಲ. ಬಾವಿಕ್ಕೆರೆ ಕುಡಿಯುವ ನೀರು ಯೋಜನೆಯಿಂದ ಮೇ ೩೧ರ ವರೆಗೆ ವಿತರಿಸಲು ನೀರು ಲಭ್ಯವಾಗಲಿದೆ. ಸ್ಥಳೀಯಾಡಳಿತ ಸಂಸ್ಥೆಗಳು ಪ್ರಾದೇಶಿಕ ಜಲಮೂಲ ಗಳನ್ನು ಉಪಯೋಗಿಸಿ ನೀರನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರು ಯೋಜನೆಗಳಾದ ಜಲನಿಧಿ ಯೋಜನೆಯ ಕೊಳವೆಬಾವಿ, ಸಾರ್ವಜನಿಕ ಬಾವಿ ಎಂಬಿವುಗಳನ್ನು ಗರಿಷ್ಠವಾಗಿ ಉಪಯೋಗಿಸಿಕೊಳ್ಳಬೇಕು. ಯಾವುದಾದರೂ ಪಂಚಾಯತ್ನಲ್ಲಿ ಅಗತ್ಯದ ಕುಡಿಯುವ ನೀರು ಲಭ್ಯ ವಿಲ್ಲದಿದ್ದರೆ ಬಾವಿ ಕೆರೆ ಯೋಜನೆ ಯಿಂದ ಕುಡಿಯುವ ನೀರನ್ನು ಉಪ ಯೋಗಿಸ ಬಹುದಾಗಿದೆ. ಕುಡಿಯುವ ನೀರು ತೀವ್ರಕ್ಷಾಮ ಎದುರಿಸುವವರು ಕಲೆಕ್ಟರೇಟ್ನ ಕಂಟ್ರೋಲ್ ರೂಂನಲ್ಲಿ ತಿಳಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿ ದ್ದಾರೆ. 04994-257700, 9446601700 ಎಂಬ ನಂಬ್ರದಲ್ಲಿ ಕರೆಮಾಡಬಹುದಾಗಿದೆ.
ಜಿಲ್ಲಾ ವಿಕೋಪ ನಿವಾರಣಾ ಸಮಿತಿ ಹಾಗೂ ಪಂಚಾಯತ್ ನಗರಸಭಾ ಕಾರ್ಯ ದರ್ಶಿಗಳ, ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡು ತ್ತಿದ್ದರು. ಕಾಲನಿಗಳು, ತಲುಪಲು ಅಸಾಧ್ಯವಾಗುವ ಪ್ರದೇಶಗಳಲ್ಲೆಲ್ಲಾ ಕುಡಿಯುವ ನೀರು ವಿತರಿಸುವುದಕ್ಕೆ ಜಿಲ್ಲಾಧಿಕಾರಿ ಸೂಚಿಸಿದರು. ಎಲ್ಲಾ ಸ್ಥಳಗಳಿಗೂ ಕುಡಿಯುವ ನೀರು ಲಭ್ಯವಾಗುತ್ತಿದೆಯೇ ಎಂದು ಪರಿಶೀಲಿಸುವುದಕ್ಕಾಗಿ ಪರಿಶಿಷ್ಟ ಪಂಗಡ ಕಾಲನಿಗಳು ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾಧಿಕಾರಿ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೆ. ಇಂಭಶೇಖರ್ ಅಧ್ಯಕ್ಷತೆ ವಹಿಸಿದರು. ಎಡಿಎಂ ಕೆ.ವಿ. ಶ್ರುತಿ, ಮೈನರ್ ಇರಿಗೇಶನ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಪಿ. ಸಂಜೀವ್, ಕೆ. ಬಾಲಕೃಷ್ಣನ್, ಕೆ. ಲಕ್ಷ್ಮಿ, ಅಶ್ವತಿಕೃಷ್ಣ, ಜಲಪ್ರಾಧಿಕಾರ, ಕೆಎಸ್ಇಬಿ, ಎಲ್ಎಸ್ಜಿಡಿ ಪ್ರತಿನಿಧಿ, ಸ್ಥಳೀಯಾಡಳಿತ ಸಂಸ್ಥೆಗಳ ಕಾರ್ಯದರ್ಶಿಗಳು ಭಾಗವಹಿಸಿದರು.