ಕುಣಿಕೆಯಲ್ಲಿ ಚಿರತೆ ಸಿಲುಕಿ ಸತ್ತ ಪ್ರಕರಣ ಇನ್ನೋರ್ವ ಸೆರೆ
ಕಾಸರಗೋಡು: ದೇಲಂಪಾಡಿ ಬಳಿಯ ಪಾಂಡಿ ಮಲ್ಲಂಪಾರೆಯಲ್ಲಿ ಕಾಡು ಹಂದಿಯನ್ನು ಸೆರೆ ಹಿಡಿಯಲು ಇರಿಸಲಾಗಿದ್ದ ಕುಣಿಕೆಯಲ್ಲಿ ಚಿರತೆ ಸಿಲುಕಿ ಸತ್ತ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಅರಣ್ಯ ಫಾರೆಸ್ಟ್ ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ರ ನೇತೃತ್ವದ ಅರಣ್ಯ ಪಾಲಕರ ತಂಡ ಇನ್ನೋರ್ವನನ್ನು ಬಂಧಿಸಿದೆ. ಕುಣಿಕೆ ಇರಿಸಲು ಸಹಾಯ ಒದಗಿಸಿದ ಮಲ್ಲಂಪಾರೆಯ ಸುಂದರ (38) ಎಂಬಾ ತ ಬಂಧಿತನಾದ ವ್ಯಕ್ತಿ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮಲ್ಲಂಪಾರೆಯ ಚಂದ್ರ ಶೇಖರ್ ನಾಯ್ಕ (30) ಎಂಬಾತನನ್ನು ಅರಣ್ಯಪಾಲಕರು ಈ ಹಿಂದೆ ಬಂಧಿಸಿ ದ್ದರು. ಕುಣಿಕೆ ಇರಿಸಲು ಈತನಿಗೆ ಸುಂದರ ಸಹಾಯ ಒದಗಿಸಿದ್ದನೆಂದೂ, ಆರೋಪಿಯನ್ನು ಇಂದು ನ್ಯಾಯಾಲ ಯದಲ್ಲಿ ಹಾಜರುಪಡಿಸಲಾಗುವುದು. ಅರಣ್ಯ ಪಾಲಕರು ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದ ಅರಣ್ಯ ಪಾಲಕರ ತಂಡದಲ್ಲಿ ಸೆಕ್ಷನ್ ಫೋರೆಸ್ಟ್ ಆಫೀಸರ್ ಎಂ.ಪಿ. ರಾಜು, ಬೀಟ್ ಆಫೀಸರ್ಗಳಾದ ರಾಜೇಶ್, ಶಿವಕೀರ್ತಿ ಮತ್ತು ವಿನೀಶ್ ಎಂಬವರು ಒಳಗೊಂಡಿದ್ದರು.