ಕುದ್ರೆಪ್ಪಾಡಿ ಕ್ಷೇತ್ರದಲ್ಲಿ ಷಷ್ಠಿ ಉತ್ಸವ
ಸೀತಾಂಗೋಳಿ: ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ಪ್ರಯುಕ್ತ ನಾಳೆ ಹಾಗೂ 7ರಂದು ವಿವಿಧ ಕಾರ್ಯಕ್ರಮ ನಡೆಯಲಿದೆ.
ನಾಳೆ ರಾತ್ರಿ 8ಕ್ಕೆ ವಿಶೇಷ ಕಾರ್ತಿಕ ಪೂಜೆ, ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ, 8.30ರಿಂದ ಯಕ್ಷಗಾನ, 7ರಂದು ಬೆಳಿಗ್ಗೆ 7ಕ್ಕೆ ಗಣಪತಿಹವನ, ವೇದಪಾರಾಯಣ, 9ಕ್ಕೆ ಭಜನೆ, 9.30ಕ್ಕೆ ನವಕ ಕಲಶಾಭಿಷೇಕ, 11.30ಕ್ಕೆ ತುಲಾ ಭಾರ, ಮಧ್ಯಾಹ್ನ 12ಕ್ಕೆ ಮಹಾ ಪೂಜೆ, 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 6ಕ್ಕೆ ದೀಪಾರಾಧನೆ, ತಾಯಂ ಬಕ, 6.30ಕ್ಕೆ ಭಜನೆ, ರಾತ್ರಿ 7.30ಕ್ಕೆ ಮಕ್ಕಳಿಂದ ನೃತ್ಯ ಕಾರ್ಯಕ್ರಮ, 9ಕ್ಕೆ ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ಸಿಡಿಮದ್ದು ಪ್ರದರ್ಶನ, ದರ್ಶನಬಲಿ, ರಾಜಾಂಗಣ ಪ್ರಾಸಾದ, ಮಂತ್ರಾಕ್ಷತೆ ನಡೆಯಲಿದೆ.