ಕುಬಣೂರಿನಲ್ಲಿ ಬೆಂಕಿ ಅನಾಹುತ ನಿಗೂಢತೆ: ಪಂಚಾಯತ್ ಕಾರ್ಯದರ್ಶಿ ದೂರಿನಂತೆ ಕೇಸು ದಾಖಲು; ತನಿಖೆ ಆರಂಭ
ಕುಂಬಳೆ/ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ತ್ಯಾಜ್ಯ ಸಂಸ್ಕರಣೆ ಕೇಂದ್ರವಾದ ಕುಬಣೂರಿನಲ್ಲಿ ಉಂ ಟಾದ ಬೆಂಕಿ ಅನಾಹುತದಲ್ಲಿ ನಿಗೂ ಢತೆಗಳಿವೆಯೆಂದು ವಿವಿಧ ಸಂಘಟ ನೆಗಳು ಆರೋಪಗಳನ್ನು ಹೊರಿಸಿರುವ ಬೆನ್ನಲ್ಲೇ ಪಂಚಾಯತ್ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಾರ್ಯದರ್ಶಿ ನಾರಾಯಾಣ ನಾಯ್ಕ್ ದೂರು ನೀಡಿದ್ದಾರೆ. ಬೆಂಕಿ ಅನಾಹುತ ದಲ್ಲಿ ೯೦ ಲಕ್ಷರೂಪಾಯಿಗಳ ನಷ್ಟವುಂ ಟಾಗಿದೆಯೆಂದೂ ತ್ಯಾಜ್ಯ ರಾಶಿಯ ನಾಲ್ಕು ಭಾಗದಿಂದಲೂ ಏಕ ಕಾಲದಲ್ಲಿ ಬೆಂಕಿ ಹತ್ತಿಕೊಂಡಿರುವುದರಲ್ಲಿ ನಿಗೂಢತೆಗಳಿವೆಯೆಂದೂ ಈ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಬಗ್ಗೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.
ಮೊನ್ನೆ ರಾತ್ರಿ ೧೦ಗಂಟೆ ವೇಳೆ ತ್ಯಾಜ್ಯ ರಾಶಿಗೆ ಬೆಂಕಿ ಹತ್ತಿಕೊಂಡಿದೆ. ಉಪ್ಪಳದಿಂದ ತಲುಪಿದ ಎರಡು ಘಟಕ ಅಗ್ನಿಶಾಮಕದಳ ಬೆಂಕಿ ನಂದಿಸಲೆತ್ನಿಸಿ ದರೂ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಯಲ್ಲಿ ಕಾಸರಗೋಡು, ಕಾಞಂಗಾಡ್, ಕುತ್ತಿಕ್ಕೋಲು, ತೃಕ್ಕರಿಪುರ, ಪಯ್ಯನ್ನೂರಿ ನಿಂದಲೂ ಹೆಚ್ಚಿನ ಅಗ್ನಿಶಾಮಕದಳ ತಲುಪಿ ನಿನ್ನೆ ಬೆಳಿಗ್ಗೆ ೧೦ ಗಂಟೆ ವೇಳೆ ಬೆಂಕಿಯನ್ನು ಪೂರ್ಣವಾಗಿ ನಂದಿಸಲು ಸಾಧ್ಯವಾಯಿತು.
ಬೆಂಕಿ ಅನಾಹುತದ ಹಿಂದೆ ನಿಗೂಢತೆಗಳಿವೆಯೆಂದೂ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಮಂಗಲ್ಪಾಡಿ ಜನಕೀಯ ವೇದಿ ಒತ್ತಾ ಯಿಸಿದೆ. ತ್ಯಾಜ್ಯವನ್ನು ತೆರವುಗೊಳಿಸಲು ಹೊಣೆಗಾರಿಕೆ ವಹಿಸಿಕೊಂಡವರೇ ಈ ಬೆಂಕಿ ಅನಾಹುತಕ್ಕೆ ಕಾರಣವೆಂದು ಸಂಶಯಿಸುತ್ತಿರುವುದಾಗಿ ಪದಾಧಿಕಾರಿ ಗಳಾದ ಸಿದ್ದಿಕ್ ಕೈಕಂಬ, ಅಶ್ರಫ್, ಮೂಸಕುಂಞಿ, ಮಹಮೂದ್ ಕೈಕಂಬ, ಸೈನುದ್ದೀನ್ ಅಡ್ಕ ಎಂಬಿವರು ಪತ್ರಿಕಾಗೋ ಷ್ಠಿಯಲ್ಲಿ ಆರೋಪಿಸಿದ್ದಾರೆ.
ಕುಬಣೂರಿನಲ್ಲಿ ೧೮ ವರ್ಷಗಳಿಂದ ರಾಶಿ ಹಾಕಲಾದ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಶಾಸಕರಿಗೆ ಮನವಿ ನೀಡಿರುವುದಾಗಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಂ. ವಿಜಯ ಕುಮಾರ್ ರೈ ತಿಳಿಸಿದ್ದಾರೆ. ಬೆಂಕಿ ಅನಾಹುತದ ಕುರಿತು ತನಿಖೆ ನಡೆಸಬೇಕೆಂದು ಡಿವೈಎಫ್‌ಐ ಹಾಗೂ ಎನ್‌ಸಿಪಿ ಕೂಡಾ ಒತ್ತಾಯಿಸಿದೆ. ಇದೆ ವೇಳೆ ಬೆಂಕಿ ಅನಾಹುತದ ಕುರಿತು ಸಮಗ್ರ ತನಿಖೆ ನಡೆಸಲು ಜಿಲ್ಲಾಧಿಕಾರಿ ಕೆ. ಇಂಭಶೇಖರ್ ನಿರ್ದೇಶಿಸಿದ್ದಾರೆ. ಈ ಘಟನೆಯಲ್ಲಿವಿವಿಧ ಗುಪ್ತಚರ ಏಜೆನ್ಸಿಗಳೂ ಕೂಡಾ ತನಿಖೆ ನಡೆಸುತ್ತಿವೆ.