ಕುಮಾರಮಂಗಲ ಕ್ಷೇತ್ರ ಷಷ್ಠಿ ಮಹೋತ್ಸವ: ಸಂಜೆ ಹೊರೆಕಾಣಿಕೆ ಮೆರವಣಿಗೆ
ನೀರ್ಚಾಲು: ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಷಷ್ಠೀ ಮಹೋತ್ಸವ ನಾಳೆ ಜರಗಲಿದೆ. ಇಂದು ಸಂಜೆ 4ಕ್ಕೆ ನೀರ್ಚಾಲು ಅಶ್ವತ್ಥಕಟ್ಟೆಯಿಂದ ಹಾಗೂ ಶ್ರೀದೇವಿ ಭಜನಾ ಮಂದಿರ ಸೀತಾಂಗೋಳಿಯಿAದ ಹಸಿರುವಾಣಿ ಹೊರೆಕಾಣಿಕೆ ಹೊರಡಲಿದೆ. ನಾಳೆ ಬೆಳಿಗ್ಗೆ 6.30ಕ್ಕೆ ಗಣಪತಿ ಹೋಮ, ವೇದಪಾರಾಯಣ, 7 ಗಂಟೆಗೆ ನವಕಾಭಿಷೇಕ, 10ಕ್ಕೆ ತುಲಾಭಾರ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ದೀಪಾರಾಧನೆ, ಚೆಂಡೆಮೆÃಳ, ಸಂಜೆ 6.30ಕ್ಕೆ ಏಣಿಯರ್ಪು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 7ಗಂಟೆಗೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನಾ ಸಂಘದವರಿAದ ಹುಲ್ಪೆ ಮೆರವಣಿಗೆ, ರಾತ್ರಿ 7ಕ್ಕೆ ರಂಗಪೂಜೆ, ಉತ್ಸವ ಬಲಿ, 10ಕ್ಕೆ ಬೇಳದ ಅಶ್ವತ್ಥಕಟ್ಟೆಗೆ ಶ್ರೀದೇವರ ಘೋಷಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ, ಮಧ್ಯರಾತ್ರಿ 12 ಗಂಟೆಗೆ ರಾಜಾಂಗಣ ಪ್ರಸಾದ, ಮಂಗಳಶಯನ. 8ರಂದು ಬೆಳಿಗ್ಗೆ 8.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಏಣಿಯರ್ಪು ತರವಾಡು ಮನೆಗೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹಿಂತಿರುಗುವುದು ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನಾಳೆ ಪೂರ್ವಾಹ್ನ 7ರಿಂದ ವಿವಿಧ ಭಜನಾ ಸಂಘಗಳಿAದ ಭಜನೆ, 10.30ರಿಂದ ಕೀರ್ತನ ಕುಟೀರದ ವಿದ್ಯಾರ್ಥಿಗಳಿಂದ ಹರಿಕಥಾ ಸತ್ಸಂಗ, ಮಧ್ಯಾಹ್ನ 12ರಿಂದ ಸಾಹಿತ್ಯ ಗಾನ ನೃತ್ಯ ವೈಭವ, ಅಪರಾಹ್ನ 2ರಿಂದ ಯಕ್ಷಭಾರತಿ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6ರಿಂದ ವಿದುಷಿ ಡಾ| ವಿದ್ಯಾಲಕ್ಷಿö್ಮÃ ಬೇಳ ಇವರ ಶಿಷ್ಯೆಯರಿಂದ ನೃತ್ಯ ಸಂಭ್ರಮ, ರಾತ್ರಿ 11ರಿಂದ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಶಾಂಭವಿ ವಿಜಯ ಪ್ರದರ್ಶನಗೊಳ್ಳಲಿದೆ.