ಕುಮ್ಮನಂ ರಾಜಶೇಖರನ್ ನಾಳೆ ಕಾಸರಗೋಡಿಗೆ
ಕುಮ್ಮನಂ ರಾಜಶೇಖರನ್ ನಾಳೆ ಕಾಸರಗೋಡಿಗೆ
ಕಾಸರಗೋಡು: ಬಿಜೆಪಿಯ ಹಿರಿಯ ನೇತಾರ ಕುಮ್ಮನಂ ರಾಜಶೇ ಖರನ್ ನಾಳೆ ಕಾಸರಗೋಡಿಗೆ ಆಗಮಿಸುವರು. ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿಯವರ ಪರವಾಗಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ನಡೆಯುವ ಚುನಾವಣಾ ಪ್ರಚಾರ ಸಭೆಗಳಲ್ಲಿ ಹಾಗೂ ಎನ್ಡಿಎ ಕುಟುಂಬ ಕಾರ್ಯಕ್ರಮಗಳಲ್ಲೂ ಅವರು ಭಾಗವಹಿಸುವರು. ನಾಳೆ ಬೆಳಿಗ್ಗೆ 10 ಗಂಟೆಗೆ ಬಂದಡ್ಕ ಸಮೀಪದ ಪಾಲಾರ್ನ 185ನೇ ನಂಬ್ರದ ಬೂತ್ ಮತ್ತು 11 ಗಂಟೆಗೆ ಕುತ್ತಿಕ್ಕೋಲ್ ಪಂಚಾಯತ್ನ ಕರಿವೇಡಗಂ ಕೋಳಂನಲ್ಲಿ ನಡೆಯಲಿರುವ 191, 192 ಮತ್ತು 193 ನಂಬ್ರದ ಬೂತ್ಗಳಲ್ಲಿ ನಡೆಯುವ ಕುಟುಂಬ ಸಂಗಮ ಕಾರ್ಯಕ್ರಮದಲ್ಲೂ ಭಾಗವಹಿಸುವರು. ಅಪರಾಹ್ನ 2.30ಕ್ಕೆ ನಡೆಯುವ ಅಡ್ವಕೇಟ್ಸ್ ಸಭೆ, ಸಂಜೆ 4 ಗಂಟೆಗೆ ಕಾಸರಗೋಡಿನಲ್ಲಿ ನಡೆಯುವ ಕುಟುಂಬ ಸಂಗಮದಲ್ಲೂ ಕುಮ್ಮನಂ ಭಾಗವಹಿಸುವರು. ಆ ಬಳಿಕ ಸಂಜೆ 6 ಗಂಟೆಗೆ ಚಿತ್ತಾರಿ ಕಡಪ್ಪುರದಲ್ಲಿ ನಡೆಯುವ ಎನ್ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡುವರು