ಕುರುಡಪದವಿನಲ್ಲಿ ಬ್ಯಾಂಕ್ ಸೇವೆ ಲಭ್ಯಗೊಳಿಸಲು ಸ್ಥಳೀಯರಿಂದ ಮನವಿ

ಪೈವಳಿಕೆ: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕುರುಡಪದವಿನಲ್ಲಿ  ಬ್ಯಾಂಕ್ ಸ್ಥಾಪಿಸಬೇಕೆಂದು ಆಗ್ರಹಿಸಿ  ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್, ಕುಂಬಳೆ ಅಸಿಸ್ಟೆಂಟ್ ರಿಜಿಸ್ಟ್ರಾರ್‌ಗೆ ಸಲ್ಲಿಸಿದ ಮನವಿಯಲ್ಲಿ ಕುರುಡಪದವಿನಲ್ಲಿ  ಬ್ಯಾಂಕ್ ಸೇವೆ ಲಭ್ಯವಿಲ್ಲದಿರುವುದರ ಸಮಸ್ಯೆಗಳ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.  ಈ ಪರಿಸರದಲ್ಲಿ 400ರಷ್ಟು ಮನೆಗಳಿದ್ದು, ಅನೇಕ ವ್ಯಾಪಾರ ಸಂಸ್ಥೆಗಳು, ಶಾಲೆಗಳು, ಅಂಚೆ ಕಚೇರಿ ಸಹಿತ ಹಲವು ಸಂಸ್ಥೆಗಳು ಕಾರ್ಯವೆಸಗುತ್ತಿದೆ. ಆದರೆ ಬ್ಯಾಂಕ್ ಸೇವೆಗಾಗಿ ಇಲ್ಲಿನವರು ಪೈವಳಿಕೆ ಅಥವಾ ಬಾಯಾರು ಪ್ರದೇಶಕ್ಕೆ ಸುಮಾರು 8 ಕಿಲೋ ಮೀಟರ್ ದೂರ ಸಂಚರಿಸಿ ತೆರಳಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುರುಡಪದವಿನಲ್ಲಿ ಶೀಘ್ರವೇ ಬ್ಯಾಂಕ್ ಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನದಲ್ಲಿ ಧನುಪೂಜೆಗೆ ಭಕ್ತಸಂದಣಿ

ಕಾಸರಗೋಡು: ದೇವರಗುಡ್ಡೆ ಶ್ರೀಶೈಲ ಮಹಾದೇವ ದೇವಸ್ಥಾನ ದಲ್ಲಿ  ಮುಂಜಾನೆ ಜರಗುತ್ತಿರುವ ಧನುಪೂಜಾ ಮಹೋತ್ಸವದಲ್ಲಿ ಭಕ್ತರ ಸಂದಣಿ ಕಂಡುಬರುತ್ತಿದೆ.  ಈ ತಿಂಗಳ 14ರಂದು ಧನುಪೂಜಾ ಮಹೋತ್ಸವ ಕೊನೆಗೊಳ್ಳಲಿದ್ದು, ಈಗಾಗಲೇ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾ ಗಿದೆ.  ನಾಳೆ  ಬೆಳಿಗ್ಗೆ ಕುಣಿತ ಭಜನೆ, 13ರಂದು ಬೆಳಿಗ್ಗೆ ಕುಣಿತ ಭಜನೆ ಹಾಗೂ ಧನುಮಾಸ ತಿರುವಾದಿರ ನಡೆಯಲಿದೆ. ೧೪ರಂದು  ಸಂಜೆ ೬ರಿಂದ  ವಿವಿಧ ಭಜನಾ ಮಂಡಳಿ ಗಳಿಂದ ಭಜನೆ ನಡೆಯಲಿದ್ದು, ರಾತ್ರಿ ೭.೩೦ಕ್ಕೆ ಮಕರಸಂಕ್ರಮಣ ಪ್ರಯುಕ್ತ ಸಾಮೂಹಿಕ ಶನೀಶ್ವರಪೂಜೆ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page