ಕುಳೂರು ಅರಸುಸಂಕಲ ಕ್ಷೇತ್ರ ಶ್ರೀಮದ್ಭಾಗವತ ಸಪ್ತಾಹ ಆರಂಭ
ಮೀಂಜ: ಕುಳೂರು ಶ್ರೀ ಅರಸು ಸಂಕಲ ದೈವಕ್ಷೇತ್ರದಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ ಇಂದಿನಿಂದ ಈ ತಿಂಗಳ ೧೭ರ ವರೆಗೆ ನಡೆಯಲಿದೆ. ಇದರಂಗವಾಗಿ ನಿನ್ನೆ ಸಂಜೆ ಋತ್ವಿಜರ ಆಗಮನವಾಗಿದೆ. ಇಂದು ಬೆಳಿಗ್ಗೆ ದೀಪಪ್ರಜ್ವಲನೆ, ಪುಣ್ಯಾಹ ವಾಚನ, ಪ್ರಧಾನ ಕಲಶ ಪ್ರತಿಷ್ಠೆ, ಭಾಗವತ ಪಾರಾಯಣ ಆರಂಭ, ಮಹಾಗಣಪತಿ ಹವನ, ಕಲ್ಪೋಕ್ತ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತಪಣೆ ನಡೆಯಿತು.ಸಂಜೆ ೩ರಿಂದ ಭಜನೆ, ೫ರಿಂದ ಭಾಗವತ ಪ್ರವಚನ, ರಾತ್ರಿ ೭.೩೦ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ನಾಳೆ ಬೆಳಿಗ್ಗೆ ೭ಕ್ಕೆ ಭಾಗವತ ಪಾರಾಯಣ ನಡೆಯಲಿದ್ದು, ಸಂಜೆ ೫ರಿಂದ ಪ್ರವಚನ ನಡೆಯಲಿದೆ. ೧೭ರಂದು ಬೆಳಿಗ್ಗೆ ೮ಕ್ಕೆ ಸಪ್ತಾಹ ಯಜ್ಞ. ಪ್ರವಚನ ಮಧ್ಯಾಹ್ನ ೧೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡುವರು. ಶ್ರೀಧರ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಅನಂತನಾರಾ ಯಣ ಭಟ್, ಶಶಿಕಲಾ ಸುವರ್ಣ, ಮುಖೇಶ್ ಅತಿಥಿಗಳಾಗಿ ಭಾಗವಹಿಸುವರು.