ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಾಬ್ದಿ ಸಂಭ್ರಮ ನಾಳೆಯಿಂದ
ಉಪ್ಪಳ: ಕುಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ನಾಳೆ, 12ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ 9ಕ್ಕೆ ಚೆಂಡೆ ವಾದನದೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳ ಸ್ವಾಗತ, 9.30ಕ್ಕೆ ಶತಮಾ ನೋತ್ಸವ ಸಮಿತಿ ಅಧ್ಯಕ್ಷ ಮುಹಮ್ಮದ್ ಹಾಜಿ ಕಂಚಿಲ ರವರಿಂದ ಧ್ವಜÁರೋ ಹಣ, 10ಕ್ಕೆ ನೂತನ ಸದಾಶಿವ ರಂಗ ಮಂದಿರವನ್ನು ಉದ್ಯಮಿ ಸದಾಶಿವ ಶೆಟ್ಟಿ.ಕೆ ಕುಳೂರು ಕನ್ಯಾನ ಉದ್ಘಾಟಿಸುವರು. ಸಭಾಂಗಣವನ್ನು ರಘುರಾಮ.ಕೆ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. 10.15ರಿಂದ ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮ, 11.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಗೌರವಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅಧ್ಯಕ್ಷತೆ ವಹಿಸುವರು. ದಾಸಣ್ಣ ಆಳ್ವ ಕುಳೂರು ಬೀಡು ಉದ್ಘಾಟಿಸುವರು. “ಅರಳು” ಸ್ಮರಣ ಸಂಚಿಕೆಯನ್ನು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್.ವಿ ಬಿಡುಗಡೆಗೊಳಿಸುವರು. ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್ ಜಯಾನಂದ ಸಹಿತ ವಿವಿಧ ವಲಯಗಳ ಗಣ್ಯರು ಭಾಗವಹಿಸುವರು. ಸಂಜೆ 6ಕ್ಕೆ ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು, ಹಳೇ ವಿದ್ಯಾರ್ಥಿಗಳು ಹಾಗೂ ಊರವರಿಂದ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮ, 6.30ಕ್ಕೆ ಶಾಲಾ ಮಕ್ಕಳಿಂದ ಸೃಷ್ಟಿ ಕಿರುನಾಟಕ ಪ್ರದರ್ಶನ, 7.30ಕ್ಕೆ ಜನಪದ ಹಾಡು 9ಕ್ಕೆ ಶಶಿಪ್ರಭಾ ಪರಿಣಯ ಯಕ್ಷಗಾನ, 12ರಂದು ಬೆಳಿಗ್ಗೆ 9.30ಕ್ಕೆ ಹಗ್ಗ ಜಗ್ಗಾಟ, 3ಕ್ಕೆ ರಸಮಂಜರಿ, ಸಂಜೆ 5ಕ್ಕೆ ಡ್ಯಾನ್ಸ್ ಮತ್ತು ಕಾಮಿಡಿ ಶೋ, ರಾತ್ರಿ 7ಕ್ಕೆ ನಡೆಯುವ ಸಮಾರೋಪದಲ್ಲಿ ಮೊಹಮ್ಮದ್ ಕಂಚಿಲ ಅಧ್ಯಕ್ಷತೆ ವಹಿಸುವರು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸಹಿತ ಹಲವು ಗಣ್ಯರು ಭಾಗವಹಿಸುವರು. ಸನ್ಮಾನ ಹಾಗೂ ನಗೆ ಮಲ್ಲಿಗೆ ಪುಸ್ತಕ ಬಿಡುಗಡೆ, ಬಹುಮಾನ ವಿತರಣೆ ಈ ಸಂದರ್ಭದಲ್ಲಿ ನಡೆಯಲಿದೆ.