ಕುಸಿದು ಬಿದ್ದು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು
ನೀರ್ಚಾಲು: ಕುಸಿದು ಬಿದ್ದು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟರು.
ಕನ್ಯಪ್ಪಾಡಿ ಬಳಿಯ ಓಣಿಯಡ್ಕ ಎಂಬಲ್ಲಿನ ದಿ| ಕೃಷ್ಣ ನಾಯ್ಕರ ಪುತ್ರ ರವಿ (42) ಮೃತಪಟ್ಟ ವ್ಯಕ್ತಿ. ಇವರು ಪೈಂಟಿಂಗ್ ಕಾರ್ಮಿಕನಾಗಿದ್ದರು. ಮೊನ್ನೆ ಕೂದಲು ಕತ್ತರಿಸಲೆಂದು ನೀರ್ಚಾಲ್‌ನ ಕ್ಷೌರದಂಗಡಿಗೆ ತಲುಪಿದ್ದರು. ಈ ವೇಳೆ ಅಲ್ಲಿ ಕುಸಿದು ಬಿದ್ದ ರವಿಯನ್ನು ಕುಂಬಳೆಯ ಆಸ್ಪತ್ರೆಗೂ, ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಮಧ್ಯಾಹ್ನ ನಿಧನ ಸಂಭವಿಸಿದೆ.
ಮೃತರು ತಾಯಿ ತಿರುಮಲೇಶ್ವರಿ, ಪತ್ನಿ ಯಶೋಧ, ಮಕ್ಕಳಾದ ಮನ್ವಿತ, ತೃಷ, ಸಹೋದರ- ಸಹೋದರಿಯರಾದ ಚಂದ್ರಶೇಖರ, ಗಂಗಾಧರ, ಸುರೇಶ್, ಕುಸುಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.