ಕುಸಿಯಲು ಸಿದ್ಧವಾದ ಮರದಿಂದ ಅಪಾಯ ಭೀತಿ
ಮಂಜೇಶ್ವರ: ಗೋವಿಂದ ಪೈ ಕಾಲೇಜು ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಗೆ ಹೊಂ ದಿಕೊಂಡು ದೊಡ್ಡ ಮರವೊಂದು ಬೇರು ಸಹಿತ ಕಿತ್ತು ಬೀಳುವ ಸ್ಥಿತಿಯ ಲ್ಲಿದ್ದು ಅಪಾಯ ಆಹ್ವಾನಿಸುತ್ತಿದೆ. ಇದರಿಂದ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಸ್ಥಳೀಯ ಪ್ರಯಾ ಣಿಕರಲ್ಲಿ ಆತಂಕ ನೆಲೆಗೊಂಡಿದೆ.
ಮಳೆಗೆ ಮರದ ಬುಡದ ಮಣ್ಣು ಕುಸಿದು ಬೇರುಗಳು ಕಂಡು ಬರುತ್ತಿದ್ದು, ಇದು ಕುಸಿಯುವ ಸ್ಥಿತಿಯಲ್ಲಿದೆ. ಈ ಭಾಗದಲ್ಲಿದ್ದ ಹಲವಾರು ಮರಗಳನ್ನು ಇತ್ತೀಚೆಗೆ ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿತ್ತು.
ಉಳಿದಿರುವ ಈ ಮರವೊಂದು ಗಾಳಿಗೆ ಅಲುಗಾಡುತ್ತಿದ್ದು, ಬಿದ್ದರೆ ದೊಡ್ಡ ಅನಾಹುತ ಆಗಬಹುದೆಂದು ಸ್ಥಳೀಯರು ತಿಳಿಸುತ್ತಾರೆ. ಈ ಮರದ ಬಳಿಯಲ್ಲೇ ವಿದ್ಯಾರ್ಥಿಗಳು, ಪ್ರಯಾ ಣಿಕರು ಬಸ್‌ಗಾಗಿ ಕಾಯುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ. ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲವೆಂದು ದೂರಿದ್ದು, ತಕ್ಷಣ ಅಪಾಯ ಭೀತಿಯನ್ನು ದೂರಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.