ಕೂಟತ್ತಜೆ ದೈವಸ್ಥಾನ ಬ್ರಹ್ಮಕಲಶೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಜೇಶವರ: ಕೂಟತ್ತಜೆ ಕ್ಷೇತ್ರದಲ್ಲಿ ಉಳ್ಳಾಲ್ತಿ ಅಮ್ಮ, ಬಂಟ ಜಾವದೆ ಮತ್ತು ತೋಡಕುಕ್ಕಿನಾರ್ ಪರಿವಾರ ದೈವಗಳೊಂದಿಗೆ ನೆಲೆಗೊಂಡಿ ರುವ ಸ್ಥಾನ, ಮಾಡ ಮತ್ತು ಭಂಡಾರ ಮನೆಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದ್ದು, ಈ ತಿಂಗಳ 30ರಿಂದ ಎಪ್ರಿಲ್ 6ರ ತನಕ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಿನ್ನೆ ಬಿಡುಗಡೆಗೊಳಿಸ ಲಾಯಿತು. 30ರಂದು ಅಪರಾಹ್ನ 3.30ಕ್ಕೆ ವಿವಿಧ ಪ್ರದೇಶಗಳಿಂದ ಹೊರೆಕಾಣಿಕೆ ಮೆರವಣಿಗೆ ದೈವಸ್ಥಾನಕ್ಕೆ ಆಗಮಿಸಲಿದೆ. ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸ್ವಾಮೀಜಿಗಳು, ನಾಡಿನ ಗಣ್ಯ ವ್ಯಕ್ತಿಗಳು ಭಾಗವಹಿಸುವರು ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಶೈಲೇಂದ್ರ ಭರತ್ ನಾಯ್ಕ್ ನಚ್ಚಗುತ್ತು ತಿಳಿಸಿದ್ದಾರೆ.
ಈ ಬಗ್ಗೆ ನಡೆದ ಸುದ್ಧಿಗೋಷ್ಠಿಯಲ್ಲಿ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಪೊಯ್ಯತ್ತಬೈಲು, ಸತೀಶ್ ಜೋಗಿ ಕೂಟತ್ತಜೆ, ಸುರೇಶ್ ಕೊಂಡೆ ಕೂವೆತ್ತಬೈಲು, ಪ್ರಧಾನ ಸಂಚಾಲಕ ನಂದರಾಜ್ ಶೆಟ್ಟಿ, ಕಾರ್ಯದರ್ಶಿ ಆನಂದ ಜೋಗಿ, ಉಗ್ಗಪ್ಪ ಮಾಣೈ, ಹರೀಶ್ ಜೋಗಿ ಉಪಸ್ಥಿತರಿದ್ದರು.