ಕೂಡ್ಲು ಶಾಲಾ ಪ್ರತಿಭೆಗಳಿಗೆ ಗೌರವಾರ್ಪಣೆ
ರಾಮದಾಸ ನಗರ: ಕೊಲ್ಲಂನಲ್ಲಿ ಜರಗಿದ ಕೇರಳ ರಾಜ್ಯ ಶಾಲಾ ಕಲೋ ತ್ಸವದಲ್ಲಿ ಸಂಸ್ಕೃತ ವಿಭಾಗದ ಚಂಪು ಪ್ರಭಾಷಣ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದ ಶಿವಾನಿ ಕೂಡ್ಲು ಹಾಗೂ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಎ ಗ್ರೇಡ್ ಲಭಿಸಿದ ವೈಷ್ಣವಿ ಬಿ ಎಸ್ ಇವರಿಗೆ ಕೂಡ್ಲು ಶಾಲಾ ವತಿಯಿಂದ ಗೌರ ವಾರ್ಪಣೆ ನಡೆಸಲಾಯಿತು. ಮುಖ್ಯೋ ಪಾಧ್ಯಾಯ ಶ್ರೀಹರಿ ಗೌರವಿಸಿದರು. ಶಾಲಾ ಕಲೋತ್ಸವದ ಸಂಚಾಲಕರಾದ ಶ್ರೀಲತಾ, ರಾಜಶ್ರೀ, ಹರ್ಷಿತ ಹಾಗು ಸಂಸ್ಕೃತ ಕಲೋತ್ಸವದ ಸಂಚಾಲಕ ಮುರಳಿಧರ ಶರ್ಮ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಿರಿಯ ಅಧ್ಯಾಪಕ ಹರ್ಷಕುಮಾರ್ ನಿರೂಪಿಸಿದರು.