ಕೃಷಿಕ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಮಧೂರು: ಇಲ್ಲಿಗೆ ಸಮೀಪದ ಮುಟ್ಟತ್ತೋಡಿ ಹಿದಾಯತ್‌ನಗರ ಮಲಯಂಗಳ ನಿವಾಸಿ ಸುಂದರ (60) ಎಂಬವರು ನಿನ್ನೆ ಮನೆಯೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಸುಂ ದರಿ, ಮಕ್ಕಳಾದ ಆನಂದ, ವೇಣು, ರಾಜೇಶ್ವರಿ, ವಿನು, ಸಹೋದರ ರಾಮಚಂದ್ರ, ಐತ್ತಪ್ಪ, ಸಹೋದರಿ ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ. ವಿದ್ಯಾನಗರ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದರು.