ಕೃಷ್ಣನಗರ ಶ್ರೀ ಕೃಷ್ಣ ಭಜನಾ ಸಂಘದ ೪೮ನೇ ವರ್ಷದ ಭಜನಾ ವಾರ್ಷಿಕೋತ್ಸವ ನಾಳೆಯಿಂದ
ಉಪ್ಪಳ: ಶ್ರೀ ಕೃಷ್ಣ ಭಜನಾ ಸಂಘ ಕೃಷ್ಣನಗರ ಮಂಗಲ್ಪಾಡಿ ಇದರ 48ನೇ ವರ್ಷದ ಭಜನಾ ವಾರ್ಷಿಕೋತ್ಸವ ಹಾಗೂ ಅಖಂಡ ಭಜನಾ ಸಪ್ತಾಹ ನಾಳೆಯಿಂದ 26ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಾಳೆ ಬೆಳಿಗ್ಗೆ 8ಕ್ಕೆ ಸ್ಥಳ ಶುದ್ದಿ, ಸಹಿತ ವಿವಿಧ ವೈಧಿಕ ಕಾರ್ಯಕ್ರಮ, ಸಂಜೆ 4ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಅನ್ನಸಂತರ್ಪಣೆ, ರಾತ್ರಿ 7.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ವೀರಪ್ಪ ಅಂಬಾರು ಪ್ರಾಸ್ತಾವಿಕ ಭಾಷಣ ಮಾಡುವರು. ಅರುಣ್‌ರಾಜ್ ಅಂಬಾ ರು ಧಾರ್ಮಿಕ ಉಪನ್ಯಾಸ ನೀಡುವರು. ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ.ಕೌಶಿಕ್ ಶೆಟ್ಟಿ ಮಂಗಲ್ಪಾಡಿ, ಡಾ.ಪ್ರವೀಣ್ ಕುಮಾರ್.ಜೆ, ಎಚ್.ಕೆ ಶೆಟ್ಟಿ ಚೆರುಗೋಳಿ, ಜಗದೀಶ ಬೆಳಂದೂರು, ಹರೀಶ. ಎಂ, ವಿಶ್ವನಾಥ.ಒ, ಸುಧಾ ಗಣೇಶ, ವಿಜಯ ಕುಮಾರ್ ಕೃಷ್ಣನಗರ, ವಿಜಯ್.ಕೆ.ಆರ್, ರಾಮ.ಎಂ, ಭಾಗಿ ಅಂಬಾರು ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಡಾ.ಕುಮಾರಿ ರಂಜಿತ ಎಂ. ಮಾಡೂರು, ಸ್ವರಾಜ್ ಶಿವ ಮಂಗಲ್ಪಾಡಿ, ರವೀಂದ್ರ ಅಂಬಾರು ಇವರನ್ನು ಸನ್ಮಾನಿಸಲಾಗುವುದು. ರಾತ್ರಿ 9ರಿಂದ ನೃತ್ಯ ವೈವಿಧ್ಯ, 19ರಂದು ಸೂರ್ಯೋದಯಕ್ಕೆ ಆಖಂಡ ಭಜನಾ ಸಪ್ತಾಹವನ್ನು ಶಿಶಿಕಾಂತ ಮಾಸ್ಟರ್ ಐಲ ದೀಪ ಪ್ರಜ್ವಲನೆಗೊಳಿಸಿ ಚಾಲನೆ ನೀಡುವರು. ಬಳಿಕ ವಿವಿಧ ತಂಡ ಗಳಿಂದ ಭಜನೆ, 26ರಂದು ಸೂರ್ಯೋದಯಕ್ಕೆ ಮಹಾ ಮಂಗಳಾರತಿ, ಸಂಜೆ 7.30ಕ್ಕೆ ಆನಂದ ಭಜನೆ ನಡೆಯಲಿದೆ.