ಕೃಷ್ಣನ್ ಕೆ.ಕೆ. ಸ್ವಾಮಿಕೃಪಾರಿಗೆ ವೈದ್ಯರತ್ನ ಪ್ರಶಸ್ತಿ ಪ್ರದಾನ
ಬದಿಯಡ್ಕ: ಹೈದರಾಬಾದ್ ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿರುವ ಬಹುಜನ ಸಾಹಿತ್ಯ ಅಕಾಡೆಮಿ ವತಿ ಯಿಂದ ನೀಡಲಾಗುವ ವೈದ್ಯರತ್ನ ರಾಷ್ಟ್ರೀ ಯ ಪ್ರಶಸ್ತಿಗೆ ಭಾಜನರಾದ ಬದಿಯಡ್ಕ ಕನ್ನೆಪ್ಪಾಡಿ ಸ್ವಾಮಿಕೃಪಾ ತರವಾಡಿನ ಕೃಷ್ಣನ್ ಕೆ.ಕೆ. ಅವರಿಗೆ ಬಿಎಸ್‌ಎ ಅಖಿಲ ಭಾರತ ಅಧ್ಯಕ್ಷ ನಲ್ಲ ರಾಧಾಕೃಷ್ಣನ್ ವೈದ್ಯ ರತ್ನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿದರು. ನವದೆಹಲಿ ಲೋ ಆಂದ್ರಭವನ್ ಆಡಿಟೋರಿಯಂ ನಲ್ಲಿ ನಡೆದ 17ನೇ ರಾಷ್ಟ್ರೀಯ ಸಮಾ ವೇಶದಲ್ಲಿ ಕೇಂದ್ರ ಸಾಮಾಜಿಕ ಕಲ್ಯಾಣ ಇಲಾಖಾ ಸಚಿವ ಮುಖೇಶ್ ಕುಮಾರ್ ಅಹ್ಲಾವತ್ ಉಪಸ್ಥಿತರಿದ್ದರು. ಸಾಮಾಜಿಕ, ಧಾರ್ಮಿಕ ಕಾರ್ಯಗಳಲ್ಲಿ ಮೊಗೇರ ಸರ್ವೀಸ್ ಸೊಸೈಟಿ, ಕನ್ನೆಪ್ಪಾಡಿ ಕೊಡ್ಯಮೆ ಅಂತಲ ಮೊಗೇರ ಚಾವಡಿಯ ಪದಾಧಿಕಾರಿ ಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ.