ಕೃಷ್ಣ ಕೆಕೆ ಸ್ವಾಮಿಕೃಪಾಗೆ ದೇಶೀಯ ಪ್ರಶಸ್ತಿ
ಬದಿಯಡ್ಕ: ಹೈದರಾಬಾದ್ ಕೇಂದ್ರೀಕರಿಸಿ ಕಾರ್ಯಾಚರಿಸು ತ್ತಿರುವ ಬಹುಜನ ಸಾಹಿತ್ಯ ಅಕಾಡೆಮಿ ವತಿಯಿಂದ ನೀಡಲಾಗುವ ವೈದ್ಯರತ್ನ ದೇಶೀಯ ಪ್ರಶಸ್ತಿಗೆ ಬದಿಯಡ್ಕ ಕನ್ನೆಪ್ಪಾಡಿಯ ಕೃಷ್ಣನ್ ಕೆ.ಕೆ. ಸ್ವಾಮಿಕೃಪಾ ಆಯ್ಕೆಯಾಗಿದ್ದಾರೆ. ಡಿಸೆಂಬರ್ 15ರಂದು ನವದೆಹಲಿ ಲೋಯಲ್ಲಿ ನಡೆಯಲಿರುವ 17ನೇ ದೇಶೀಯ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಮೊಗೇರ ಸರ್ವೀಸ್ ಸೊಸೈಟಿ, ಕನ್ನೆಪ್ಪಾಡಿ ಕೊಡ್ಯಮೆ ಅಂತಲ ಮೊಗೇರ ಚಾವಡಿಯ ಪದಾಕಾರಿಯಾಗಿ ಇವರು ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದಾರೆ.