ಕೆಲಸದ ಮಧ್ಯೆ ಬಿದ್ದು ಕಲ್ಲು ಕಟ್ಟುವ ಮೇಸ್ತ್ರಿ ಮೃತ್ಯು
ಮುಳ್ಳೇರಿಯ: ನಿರ್ಮಾಣ ಕಾರ್ಮಿಕನಾಗಿದ್ದ ಕಾರಡ್ಕ ಮುಡಾಂಕುಳಂ ನಿವಾಸಿ ಕೆಲಸದ ವೇಳೆ ಬಿದ್ದು ಮೃತಪಟ್ಟರು. ಕಲ್ಲು ಕಟ್ಟುವ ಮೇಸ್ತ್ರಿಯಾಗಿದ್ದ ಮುಡಾಂಕುಳಂ ನಿವಾಸಿ ಎಂ. ನಾರಾಯಣನ್ (೬೪) ಮೃತಪಟ್ಟವರು. ಮುಂಡೋಳು ಜಂಕ್ಷನ್ ಬಳಿಯಲ್ಲಿ ಮನೆಯೊಂದರ ಮಹಡಿ ನಿರ್ಮಾಣ ವೇಳೆ ಆಯ ತಪ್ಪಿ ಶನಿವಾರ ಬಿದ್ದಿದ್ದಾರೆ. ಕೂಡಲೇ ಇವರನ್ನು ಮುಳ್ಳೇರಿಯದ ಸಹಕಾರಿ ಆಸ್ಪತ್ರೆಗೆ ಕೊಂಡು ಹೋಗಲಾಗಿದೆ. ಆದರೂ ಜೀವ ರಕ್ಷಿಸಲು ಸಾಧ್ಯವಾಗಿಲ್ಲ.
ಮೃತರು ಪತ್ನಿ ನಳಿನಿ, ಮಕ್ಕಳಾದ ಶ್ರೀನ, ಶ್ರೀಮನೋಜ್, ಶೀಬಾ, ಅಳಿಯಂದಿರಾದ ಅಜಯನ್, ಅರುಣ್ ಕುಮಾರ್, ಸೊಸೆ ಸುಜಿಶಾ, ಸಹೋದರ ತಂಬಾನ್, ಸಹೋದರಿಯರಾದ ಅಮ್ಮಾಳು, ಜಾನಕಿ, ತಂಬಾಯಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಸಂಸ್ಕಾರ ನಿನ್ನೆ ಬೆಳಿಗ್ಗೆ ಮನೆ ಪರಿಸರದಲ್ಲಿ ನಡೆಯಿತು.