ಕೆವಿವಿಇಎಸ್‌ನ ವ್ಯಾಪಾರ ಸಂರಕ್ಷಣಾ ಜಾಥಾ ೨೯ರಂದು ಕಾಸರಗೋಡಿನಿಂದ
ಕಾಸರಗೋಡು: ವ್ಯಾಪಾರ ರಂಗದ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೇತೃತ್ವದಲ್ಲಿ ಚಳವಳಿಗೆ ನಿರ್ಧರಿಸಲಾಗಿದೆ. ಇದರ ಅಂಗವಾಗಿ ಈ ತಿಂಗಳ ೨೯ರಂದು ಕಾಸರಗೋ ಡಿನಿಂದ ತಿರುವನಂತಪುರಕ್ಕೆ ವ್ಯಾಪಾರ ಸಂರಕ್ಷಣಾ ಜಾಥಾ ನಡೆಸುವುದಾಗಿ ರಾಜ್ಯ ಅಧ್ಯಕ್ಷ ರಾಜು ಅಪ್ಸರ ತೃಶೂ ರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಾಥಾ ತಿರುವನಂತಪುರಕ್ಕೆ ತಲುಪುವ ಫೆಬ್ರವರಿ ೧೫ರಂದು ರಾಜ್ಯ ವ್ಯಾಪಕವಾಗಿ ಅಂಗಡಿಗಳನ್ನು ಮುಚ್ಚಿ ಚಳವಳಿ ನಡೆಸಲಾಗುವುದು.
ಕೇಂದ್ರ-ರಾಜ್ಯ ಸರಕಾರಗಳ ವ್ಯಾಪಾರ ನೀತಿಗಳಿಂದ ಕಿರು ವ್ಯಾಪಾರಿಗಳು ಸಂದಿಗ್ಧತೆಗೀಡಾಗಿದ್ದಾರೆ.
ಕಾರ್ಪರೇಟ್‌ಗಳಿಗೆ ಮಾತ್ರ ಅನುಕೂಲವಾಗುವ ಕಾನೂನು ಜ್ಯಾರಿಗೊಳಿಸುವುದರಿಂದ ಕಿರು ವ್ಯಾಪಾರಿಗಳು ತೊಂದರೆಗೀಡಾಗುತ್ತಿ ದ್ದಾರೆಂದೂ ಸಮಿತಿ ಪದಾಧಿಕಾರಿಗಳು ಆರೋಪಿಸಿದ್ದಾರೆ. ತ್ಯಾಜ್ಯ ಸಂಸ್ಕರಣೆ ಹೆಸರಲ್ಲಿ ವ್ಯಾಪಾರಿಗಳನ್ನು ಬೇಟೆಯಾ ಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕೆಂದೂ ನೇತಾರರು ಒತ್ತಾಯಿಸಿದ್ದಾರೆ. ಜಾಥಾ ಫೆಬ್ರವರಿ ೧೫ರಂದು ತಿರುವನಂತಪುರದಲ್ಲಿ ಸಮಾಪ್ತಿಗೊಂಡ ಬಳಿಕ ಐದು ಲಕ್ಷ ವ್ಯಾಪಾರಿಗಳು ಸಹಿ ಹಾಕಿದ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸ ಲಾಗುವುದೆಂದೂ ಸಂಬಂಧಪಟ್ಟವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.