ಕೆ.ಎಂ. ಮಾಣಿಯವರ 92ನೇ ಜನ್ಮದಿನಾಚರಣೆ
ವರ್ಕಾಡಿ: ದಿ| ಕೆ.ಎಂ. ಮಾಣಿಯ ವರ 92ನೇ ಜನ್ಮದಿನವನ್ನು ಕೇರಳ ಕಾಂಗ್ರೆಸ್ ಎಂ ಮಂಜೇಶ್ವರ ವಿಧಾನಸಭಾ ಮಂಡಲ ಸಮಿತಿ ವತಿಯಿಂದ ಕಾರುಣ್ಯ ದಿನಾಚರಣೆಯಾಗಿ ಆಚರಿಸಲಾಯಿತು. ಇದರಂಗವಾಗಿ ನಿನ್ನೆ ದೈಗೋಳಿ ಸಾಯಿನಿಕೇತನ ಸೇವಾಶ್ರಮದಲ್ಲಿ ಅನ್ನ ಸಂತರ್ಪಣೆ ನಡೆಸಲಾಯಿತು. ಪಕ್ಷದ ಜಿಲ್ಲಾಧ್ಯಕ್ಷ ಸಜಿ ಸೆಬಾಸ್ಟಿಯನ್ ಅಧ್ಯಕ್ಷತೆ ವಹಿಸಿದರು. ವರ್ಕಾಡಿ ಪಂ. ಅಧ್ಯಕ್ಷೆ ಭಾರತಿ ಎಸ್. ಉದ್ಘಾಟಿಸಿದರು. ಡೇನಿಯಲ್ ಡಿಸೋಜ, ಹೆನ್ರಿ ಮೊಂತೇರೊ, ಡಾ. ಉದಯ ಕುಮಾರ್, ಡಾ. ಶಾರದಾ ಉದಯ ಕುಮಾರ್, ಪಂ. ಸದಸ್ಯ ಉಮ್ಮರ್ ಬೋರ್ಕಳ ಭಾಗವಹಿಸಿದರು. ಮಂಡಲ ಅಧ್ಯಕ್ಷ ರಾಘವ ಚೇರಾಲ್ ಸ್ವಾಗತಿಸಿ, ವಂದಿಸಿದರು.