ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಪ್ರಶಸ್ತಿ
ಕಾಸರಗೋಡು: ಕಾಸರಗೋ ಡಿನ ಧಾರ್ಮಿಕ, ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿರುವ ಕೆ.ಎನ್. ವೆಂಕಟ್ರಮಣ ಹೊಳ್ಳರಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಆಶ್ರಯದಲ್ಲಿ ಕಾಸರಗೋಡು ಕನ್ನಡ ಗ್ರಾಮೋತ್ಸವದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದು, ನಗರಸಭಾ ಸದಸ್ಯೆ ಬಿ. ಶಾರದಾ ಉದ್ಘಾಟಿಸಿದರು. ನಿವೃತ್ತ ಸಹಾಯಕ ಜಿಲ್ಲಾಧಿಕಾರಿ ಶಶಿಧರ ಶೆಟ್ಟಿ, ಶಿವಪ್ರಸಾದ್ ಕೊಕ್ಕಡ, ಪ್ರತಿಮ ಹಾಸನ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಇದೇ ವೇಳೆ ಕನ್ನಡ ಗ್ರಾಮೋತ್ಸವ ಪ್ರಶಸ್ತಿಯನ್ನು ಗುರುಪ್ರಸಾದ್ ಕೋಟೆಕಣಿ ಅವರಿಗೆ ಪ್ರದಾನ ಮಾಡಲಾಯಿತು. ಪತ್ರಕರ್ತ ವೀಜಿ ಕಾಸರಗೋಡು ಪರಿಚಯಿಸಿದರು. ನಗರಸಭಾ ಮಾಜಿ ಅಧ್ಯಕ್ಷ ಶಂಕರ ಜೆ.ಪಿನಗರ, ಎಂ.ಪಿ. ಜಿಲ್ಜಿಲ್, ಹರಿದಾಸ್ ಜಯಾನಂದ ಕುಮಾರ್ ಶುಭ ಹಾರೈಸಿದರು. ಕವಿಗಳಾದ ಪ್ರತಿಮ ಹಾಸನ, ಶಿವಪ್ರಸಾದ್ ಕೊಕ್ಕಡರನ್ನು ಗೌರವಿಸಲಾಯಿತು. ದಿವಾಕರ ಪಿ. ಅಶೋಕನಗರ, ಕಾವ್ಯ ಕುಶಲ, ಪ್ರದೀಪ್ ಬೇಕಲ್, ಶ್ರೀಕಾಂತ್ ಕಾಸರಗೋಡು ಭಾಗವಹಿಸಿದರು. ರಾಧಾಕೃಷ್ಣ ಕೆ. ಉಳಿಯತ್ತಡ್ಕ ಪ್ರಸ್ತಾಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.