ಕೆ.ಪಿ.ಸಿ.ಸಿ ಯ ‘ಸಮರಾಗ್ನಿ’ ಆಂದೋಲನ ಯಾತ್ರೆ ನಾಳೆ ಆರಂಭ

ಕಾಸರಗೋಡು:  ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಕೆ.ಪಿ.ಸಿ.ಸಿ ಅಧ್ಯಕ್ಷ ಕೆ. ಸುಧಾಕರನ್ ಹಾಗೂ ವಿಪಕ್ಷ ನೇತಾರ ವಿ.ಡಿ. ಸತೀಶನ್ ನೇತೃತ್ವದಲ್ಲಿ ಹಮ್ಮಿಕೊಂಡ ಆಂದೋಲನ ಯಾತ್ರೆ ‘ಸಮರಾಗ್ನಿ’ ನಾಳೆ  ಕಾಸರಗೋಡಿನಿಂದ ಆರಂಭಗೊಳ್ಳಲಿದೆ.  ವಿದ್ಯಾನಗರದ ಕಾಸರಗೋಡು ನಗರಸಭಾ ಸ್ಟೇಡಿಯಂನಲ್ಲಿ ನಾಳೆ ಅಪರಾಹ್ನ ೩ ಗಂಟೆಗೆ ಎಐಸಿಸಿ ಸಂಘಟನಾ  ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲನ್ ಉದ್ಘಾಟಿಸು ವರು. ಕೇರಳದ ಹೊಣೆಗಾರಿಕೆಯುಳ್ಳ ಎಐಸಿಸಿ ಸೆಕ್ರೆಟರಿ ದೀಪಾದಾಸ್ ಮುನ್ಶಿ, ರಮೇಶ್ ಚೆನ್ನಿತ್ತಲ, ಸಂಸದ ರಾದ ಶಶಿ ತರೂರ್, ಕೊಡಿಕುನ್ನಿಲ್ ಸುರೇಶ್  ಮೊದಲಾದವರು ಭಾಗವಹಿಸುವರು.

ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಕಾಸರಗೋಡು ನಗರಸಭಾ ಮಿನಿ ಕಾನ್ಫರೆನ್ಸ್ ಹಾಲ್‌ನಲ್ಲಿ ಸಮಾಜದ ಸಂಕಷ್ಟವನ್ನು ಅನುಭವಿಸುವರೊಂದಿಗೆ ನೇತಾರರು ಸಮಾಲೋಚನೆ ನಡೆಸವರು.

ಜಾಥಾದಂಗವಾಗಿ ೩೦ಕ್ಕೂ ಹೆಚ್ಚು ಸಾರ್ವಜನಿಕ ಸಮ್ಮೇಳನವನ್ನು ನಡೆಸಲಾಗುವುದು.  ಅದೇ ರೀತಿ ಕಲ್ಲಿಕೋಟೆ ಕಡಪುರಂ, ಕೊಚ್ಚಿ ಮರೈನ್‌ಡ್ರೈವ್, ತೃಶೂರು ತೆಕ್ಕಿನ ಕಾಡ್ ಮೈದಾನ, ತಿರುವನಂತಪುರ ಪುತ್ತರಿಕಂಡ ಮೈದಾನದಲ್ಲಿ ರ‍್ಯಾಲಿಗಳನ್ನು ನಡೆಸಲಾಗುವುದು. ಜಾಥಾ ೨೯ರಂದು ತಿರುವನಂತಪುರ ಪುತ್ತರಿಕಂಡ ಮೈದಾನದಲ್ಲಿ ಸಾರ್ವಜನಿಕ ಸಮ್ಮೇಳನದೊಂದಿಗೆ ಸಮಾಪ್ತಿಗೊಳ್ಳಲಿದೆಯೆಂದು ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಬಾಲಕೃಷ್ಣನ್ ಪೆರಿಯ, ಎನ್. ಸುಬ್ರಹ್ಮಣ್ಯನ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page