ಕೇರಳದಲ್ಲಿ ವಯೋಜನ ವಿರುದ್ಧ ಸರಕಾರ ಆಡಳಿತದಲ್ಲಿದೆ – ಅಶ್ವಿನಿ ಎಂ.ಎಲ್
ಕಾಸರಗೋಡು: ಕೇರಳವನ್ನು ಆಳುತ್ತಿರುವ ಸರಕಾರ ವಯೋಜನ ವಿರುದ್ಧವಾಗಿದೆ ಎಂದು, ೭೦ ವರ್ಷದ ಮೇಲಿನ ಪ್ರಾಯದವರಿಗೆ ಪ್ರಧಾನಮಂತ್ರಿ ಆಯುಷ್‌ಮಾನ್ ಭಾರತ್ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಏರ್ಪಡಿಸಿದ ೫ ಲಕ್ಷ ರೂ.ವರೆಗಿನ ಆರೋಗ್ಯ ವಿಮೆ ಯೋಜನೆ ಕೇರಳದಲ್ಲಿ ಆರಂಭಿಸಲಿರುವುದು ಇದಕ್ಕಿರುವ ಪುರಾವೆ ಎಂದು ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಅಶ್ವಿನಿ ಎಂ.ಎಲ್. ನುಡಿದರು. ಪ್ರಾಯಸ್ತರಿಗೆ ಆಯುಷ್ಮಾನ್ ಭಾರತ್ ವಿಮೆ ಶೀಘ್ರವೇ ಲಭ್ಯಗೊಳಿಸಬೇಕೆಂದು ಆಗ್ರಹಿಸಿ ರಾಜ್ಯ ಆರೋಗ್ಯ ಸಚಿವೆ ವೀಣಾ ಜೋರ್ಜ್, ಕೇಂದ್ರ ಆರೋಗ್ಯ ಕುಟುಂಬ ಕ್ಷೇಮ ಇಲಾಖೆ ಸಚಿವ ಜೆ.ಪಿ. ನಡ್ಡಾರಿಗೆ ಪತ್ರ ರವಾನಿಸಿರುವುದಾಗಿ ಅಶ್ವಿನಿ ತಿಳಿಸಿದ್ದಾರೆ.