ಕೇರಳದ ಕಿರೀಟವಾಗಿ ಕಾಸರಗೋಡು ಬದಲಾಗಬೇಕು- ಸುರೇಶ್‌ಗೋಪಿ
ಕಾಸರಗೋಡು: ಕೇರಳದ ಕಿರೀಟವಾಗಿ ಕಾಸರಗೋಡು ಬದಲಾಗಬೇಕೆಂದು ಮಾಜಿ ರಾಜ್ಯಸಭಾ ಸದಸ್ಯ ಸುರೇಶ್‌ಗೋಪಿ ನುಡಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪರವನಡ್ಕ ಪಾಂಚಜನ್ಯ ಸಭಾಂಗಣದಲ್ಲಿ ನಡೆದ ಬಿಜೆಪಿ ಬೂತ್ ಅಧ್ಯಕ್ಷರ ನಾಯಕತ್ವ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಓಟಿಗೆ ಬದಲಾಗಿ ವಿಶ್ವದ ಹೃದಯವನ್ನೇ ನರೇಂದ್ರ ಮೋದಿ ಶರಣಾಗಿಸಿದ್ದಾರೆ. ಕೊಲ್ಲಿ ದೇಶಗಳಿಂದ ಲಭಿಸುವ ಸ್ವಾಗ ತವೇ ಇದಕ್ಕೆ ಉದಾಹರಣೆಯಾಗಿದೆ ಎಂದು ಸುರೇಶ್‌ಗೋಪಿ ನುಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ರೈ, ಮುಖಂಡರಾದ ಎ. ವೇಲಾಯುಧನ್, ಎಂ. ಬಲ್‌ರಾಜ್, ಪಿ. ರಮೇಶನ್, ಮನೋಜ್ ನೀಲೇಶ್ವರ, ಪ್ರಮೀಳಾ ನಾಕ್, ಎಂ. ಜನನಿ, ನಾರಾಯಣ ಕಲ್ಯಾಶ್ಶೇರಿ ಸಹಿತ ಹಲವರು ಭಾಗವಹಿಸಿದರು.