ಕೇರಳದ ಸಹಕಾರಿ ರಂಗ ಸರ್ಕಾರದ ಕಪಿಮುಷ್ಠಿಯಲ್ಲಿ-ಐತ್ತಪ್ಪ ಮವ್ವಾರು
ಕುಂಬಳೆ: ಕೃಷಿಕರು ಹಾಗೂ ಜನಸಾಮಾನ್ಯರ ವಿಶೇಷವಾಗಿ ಗ್ರಾಮೀಣ ಜನರ ಅತ್ಯಂತ ವಿಶ್ವಸ್ಥ ಸಹಕಾರಿ ಸಂಸ್ಥೆಗಳು ಅವುಗಳ ಪಾಲು ದಾರರಿಂದ ಸ್ಥಾಪಿಸಲ್ಪಟ್ಟಿವೆ.ಅವರ ಬಂಡವಾಳ ಬಳಸಿ ಕೃಷಿ, ಹೈನುಗಾರಿಕೆ, ಗ್ರಾಮೀಣ ಕಸುಬುಗಳು ಹಾಗೂ ವ್ಯಾಪಾರ ಅಭಿವೃದ್ಧಿ ಮೂಲಕ ಆರ್ಥಿಕ ಸಬಲೀಕರಣ ಸಾಧಿಸಲು ಸ್ವತಂತ್ರವಾಗಿ ಪ್ರಜಾಪ್ರಭುತ್ವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಸಂಸ್ಥೆಗಳು ಇಂದು ಕೇರಳ ಸರಕಾರದ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿವೆ ಎಂದು ಸಹಕಾರ ಭಾರತಿ ಪ್ರಾಂತ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು ಅಭಿಪ್ರಾಯಪಟ್ಟರು.
ಕುಂಬಳೆ ಪೈ ಸಭಾಂಗಣದಲ್ಲಿ ನಡೆದ ಸಹಕಾರ ಭಾರತಿ ಮಂಜೇಶ್ವರ ತಾಲೂಕು ಸಮ್ಮೇಳನವನ್ನು ಉದ್ಘಾ ಟಿಸಿ ಅವರು ಮಾತನಾಡುತ್ತಿದ್ದರು.
ಸಹಕಾರ ಸಂಘಗಳು ಬರಿಯ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾ ಗದೆ ಗ್ರಾಮೀಣ ಜನರ ವಿಶೇಷವಾಗಿ ರೈತರ ಆವಶ್ಯಕತೆಗಳನ್ನು ಮನಗಂಡು ಅವರಿಗೆ ಅಗತ್ಯ ಸೇವೆಗಳು ಹಾಗೂ ಮಾಹಿತಿಗಳನ್ನು ನೀಡಿ ಗ್ರಾಮೀಣ ಆರ್ಥಿಕ ಅಭಿವೃದ್ಧಿ ಮಾಡಬಹುದಾದ ಅವಕಾಶ ಧಾರಾಳ ಇದೆ ಎಂದು ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾ ಯಣ ಭಟ್ ಖಂಡಿಗೆ ನುಡಿದರು.
ಸಹಕಾರ ಭಾರತಿ ಮಂಜೇಶ್ವರ ತಾಲೂಕು ಅಧ್ಯಕ್ಷ ಅಶೋಕ ಬಾಡೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪದ್ಮರಾಜ ಪಟ್ಟಾಜೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಂಕರ ನಾರಾಯಣ ಭಟ್ ಕಿದೂರು ಮಾರ್ಗದರ್ಶನ ನೀಡಿದರು.
ಅಶ್ವಿನಿ ಪ್ರಾರ್ಥನೆ ಹಾಡಿದ ರು. ತಾಲೂಕು ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ವಂದಿಸಿದ ಸ್ವಾಗತ್ ಕುಮಾರ್ ನಿರೂಪಿಸಿದರು.
ನೂತನ ಪದಾಧಿಕಾರಿಗÀಳನ್ನು ಆಯ್ಕೆ ವÆಡಲಾಯಿತು. ಅಶೋಕ್ ಬಾಡೂರು(ಅಧ್ಯಕ್ಷ), ತುಕಾರಾಮ ಕುಂಬಳೆ, ಬಾಲಕೃಷ್ಣ ಶೆಟ್ಟಿ ಮೀನಾರು (ಉಪಾಧ್ಯಕ್ಷರು), ಕೃಷ್ಣ ಮೂರ್ತಿ ನೂಜಿ(ಕಾರ್ಯದರ್ಶಿ),ಜಿತೇಷ್ ನಾಯ್ಕಾಪು (ಜೊತೆ ಕಾರ್ಯದರ್ಶಿ), ವಿಶ್ವನಾಥ ಶೆಟ್ಟಿ, ವಿಶ್ವೇಶ್ವರ ಭಟ್ ಮುಂತಾದವರು ಸದಸ್ಯರಾಗಿರುವ ಸಮಿತಿಯನ್ನು ರಚಿಸಲಾಯಿತು.