ಕೇರಳವನ್ನು ಕ್ರಿಮಿನಲ್ ಮನಸ್ಸಿನವರು ಆಳುತ್ತಿದ್ದಾರೆ-ವಿಪಕ್ಷ ನಾಯಕ
ಕಾಸರಗೋಡು: ನವಕೇರಳ ಸಭೆಯ ಹೆಸರಲ್ಲಿ ಸಿಪಿಎಂನ ಕೆಲವು ಕ್ರಿಮಿನಲ್ಗಳು ವ್ಯಾಪಕ ದಾಂಧಲೆ ನಡೆಸುತ್ತಿದ್ದಾರೆಂದು ವಿರೋಧಪಕ್ಷ ನಾಯಕ ವಿ.ಡಿ. ಸತೀಶನ್ ಆರೋಪಿಸಿದ್ದಾರೆ.
ಕ್ರಿಮಿನಲ್ ಮನಸ್ಸು ಹೊಂದಿರುವವರು ಕೇರಳವನ್ನು ಆಳುತ್ತಿದ್ದಾರೆ. ಇಂತಹ ಹಿಂಸಾಚಾರಗಳಿಗೆ ಮುಖ್ಯಮಂತ್ರಿ ಪ್ರೋತ್ಸಾಹ ನೀಡುತ್ತಿದ್ದಾರೆ. ಅವರು ಸ್ಟಾಲಿನ್ ರೀತಿ ವರ್ತಿಸುತ್ತಿದ್ದಾರೆ, ಮಾತ್ರವಲ್ಲ ಮುಖ್ಯಮಂತ್ರಿ ಸಾಡಿಸ್ಟ್ ಮನೋಭಾವ ಹೊಂದಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರುಗಳು ಸಂಚರಿಸುತ್ತಿದ್ದ ಬಸ್ಸಿನ ಮೇಲೆ ಚಪ್ಪಲಿ ಎಸೆದಿದ್ದು ಒಂದು ಸಾಮಾನ್ಯ ಪ್ರತಿಕ್ರಿಯೆ ಮಾತ್ರವೇ ಆಗಿದೆ. ಅದರ ಹೆಸರಲ್ಲಿ ಕೆ.ಎಸ್.ಯು ಕಾರ್ಯಕರ್ತರ ವಿರುದ್ಧ ನರಹತ್ಯಾ ಪ್ರಕರಣ ದಾಖಲಿಸಿಕೊಂಡಿ ರುವುದು ಅಪಹಾಸ್ಯಕರವೆಂದೂ ಅವರು ಹೇಳಿದ್ದಾರೆ.ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಇಂದು ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.