ಕೇರಳ ವಿಜ್ಞಾನ ಕಾಂಗ್ರೆಸ್ ಫೆ.೮ರಿಂದ :ಮುಖ್ಯಮಂತ್ರಿ ಉದ್ಘಾಟನೆ
ಕಾಸರಗೋಡು: ೩೬ನೇ ಕೇರಳ ಸಯನ್ಸ್ ಕಾಂಗ್ರೆಸ್ ಈ ತಿಂಗಳ ೮ರಿಂದ ೧೧ರ ತನಕ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ. ೯ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಔಪಚಾರಿಕ ಉದ್ಘಾಟನೆ ನಿರ್ವಹಿಸುವರು. ‘ಏಕಾರೋಗ್ಯ ದೃಷ್ಟಿಕೋನದ ಮೂಲಕ ಕೇರಳದ ಆರ್ಥಿಕ ವ್ಯವಸ್ಥೆಯ ರೂಪಾಂತರ’ ಎಂಬುದಾಗಿದೆ ಈ ವರ್ಷದ ಸಯನ್ಸ್ ಕಾಂಗ್ರೆಸ್ನ ಪ್ರಮುಖ ವಿಷಯ. ಯುವ ಸಂಶೋಧಕರಿಗೆ, ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಸಂವಾದ ನಡೆಸಲು, ಅವರ ಅರಿವನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ ಕೇರಳ ಸಯನ್ಸ್ ಕಾಂಗ್ರೆಸ್. ೪೨೪ ಯುವ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವರು. ನೋಬಲ್ ಪ್ರಶಸ್ತಿ ವಿಜೇತ ಪ್ರೊ. ಮೋರ್ಟನ್ ಮೆಲ್ಡಲ್ ಕಾಂಗ್ರೆಸ್ನ ಪ್ರವಚನ ನಡೆಸುವರು. ಉತ್ತಮ ಯುವ ವಿಜ್ಞಾನಿಗಳಾಗಿರುವ ಪ್ರಶಸ್ತಿ, ವಿಜ್ಞಾನ ಸಾಹಿತ್ಯ ಪುರಸ್ಕಾರಗಳನ್ನು ಸಯನ್ಸ್ ಕಾಂಗ್ರೆಸ್ನಲ್ಲಿ ವಿತರಿಸಲಾಗುವುದು. ಭಾರತದ ವಿವಿಧ ಅಧ್ಯಯನ ಸಂಸ್ಥೆಗಳು, ಸ್ಟಾರ್ಟಪ್ಗಳ ಸ್ಟಾಲ್ಗಳು ಇರಲಿದೆ. ವಿದ್ಯಾರ್ಥಿಗಳಿಗೆ ಸಾರ್ವಜನಿಕರಿಗೆ ಸಯನ್ಸ್ ಎಕ್ಲೋಪನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಜಿಲ್ಲೆಯ ಸ್ಥಳೀಯ ಸಮಸ್ಯೆಗಳಿಗೆ ಉತ್ತಮ ವಿಜ್ಞಾನ ಪರಿಹಾರಮಾರ್ಗಗಳನ್ನು ನಿರ್ದೇಶಿಸುವ ಯುವಕರಿಗೆ ನಗದು ಬಹುಮಾನ ನೀಡಲಾಗುವುದು.