ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತಿ, ಅಖಂಡ ಭಜನಾ ಸಪ್ತಾಹ ನಾಳೆಯಿಂದ
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶ್ರೀ ಗಾಯತ್ರಿ ದೇವಿ ಹಾಗೂ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ನಾಳೆ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಕಟೀಲಿನ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣ ಭಾಗವಹಿಸುವರು. ನಾಳೆ ಸಂಜೆ ೬.೩೦ಕ್ಕೆ ಭಜನಾ ಸಪ್ತಾಹಕ್ಕೆ ಶ್ರೀಗಳು ಚಾಲನೆ ನೀಡುವರು. ಮಾರ್ಚ್ 1ರಂದು ಬೆಳಿಗ್ಗೆ ಮಂಗಲಾಚರಣೆ ನಡೆಯಲಿದೆ. ಚಂಡಿಕಾಹೋಮ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.