ಕೊಂಡೆವೂರಿನಲ್ಲಿ ಸಾಮೂಹಿಕ ಗೋಪೂಜೆ
ಉಪ್ಪಳ: ಸಂಸ್ಕಾರ ಸಂಘಟನೆ ಸೇವೆ ಎನ್ನುವ ಧ್ಯೇಯದೊಂದಿಗೆ ಎಸ್ಪಿವೈಎಸ್ಎಸ್ ಯೋಗ ಶಿಕ್ಷಣ ಸಮಿತಿ ಕಾಸರಗೋಡು ನಗರ ಇದರ ವತಿಯಿಂದ ಕೊಂಡೆವೂರು ಶ್ರೀ ಜಗದ್ಗುರು ನಿತ್ಯಾನಂದ ಯೋಗಾಶ್ರಮದಲ್ಲಿ ಸಾಮೂಹಿಕ ಗೋಪೂಜೆ ನಡೆಯಿತು. ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಹಿರಿಯ ಶಿಕ್ಷಣ ಪ್ರಮುಖ ಪ್ರತಾಪ ಕಾಸರಗೋಡು, ನಗರ ಶಿಕ್ಷಣ ಪ್ರಮುಖ ಶೈಲೇಶ್, ಸಂಚಾಲಕ ಹೇಮಂತ, ನೇತ್ರಾವತಿ ವಲಯ ಸಂಯೋಜಕ ಜಯರಾಮ, ಉಳ್ಳಾಲ ಚಿಂತನಾಕೂಟ ಪ್ರಮುಖ ಸದ್ಯೋಜಾತ ಸಹಿತ ಹಲವರು ಭಾಗವಹಿಸಿದರು. ಅಶ್ವಿತ ಕುಂಜತ್ತೂರು ನಿರೂಪಿಸಿದರು.