ಕೊಂಡೆವೂರು ವಿದ್ಯಾಪೀಠದಲ್ಲಿ ವಿದ್ಯಾರ್ಥಿ ಸಂಭ್ರಮ

ಉಪ್ಪಳ: ನಿತ್ಯಾನಂದ ವಿದ್ಯಾಪೀಠ ಕೊಂಡೆವೂರು ಇದರ 19ನೇ ವರ್ಷದ ವಾರ್ಷಿಕೋತ್ಸವ ಸಂಸ್ಥಾಪಕರಾದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸಂಭ್ರಮದಿAದ ಜರಗಿತು. ಸ್ವಾಮೀಜಿ ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡಿ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರಕ್ಕಾಗಿ, ಪಠ್ಯದ ಜೊತೆ ವೀರ, ಮಹಾಪುರುಷರ ಜೀವನ ಚರಿತ್ರೆಯ ಪುಸ್ತಕ ಓದಿ ದೇಶಭಕ್ತ ಪ್ರಜೆಗಳಾಗಿ ಬಾಳಿ ಬದುಕಿ ಎಂದರು. ಕಾಸರಗೋಡು ಜಿಲ್ಲೆ ಶಿಕ್ಷಣಾಧಿಕಾರಿ ದಿನೇಶನ್. ವಿ ಅಧ್ಯಕ್ಷತೆ ವಹಿಸಿದ್ದರು. ಕಮಲಾಕ್ಷ ಶಾಲಾ ಚಟುವಟಿಕೆಗಳ ವರದಿ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಪನ್ಯಾಸಕ ಡಾ|ಅಶೋಕ್ ಪದಕ ಣ್ಣಾಯ ಹಾಗೂ ಡಾ| ಮಂಜುನಾಥ ಶೆಟ್ಟಿ ಎಂ ಎಸ್ ಶುಭಹಾರೈಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಕ್ಷಮ ಇವಳಿಗೆ “ನಿತ್ಯಾನಂದ’’ ಪುರಸ್ಕಾರ ವನ್ನು, ಶ್ರಾವಣ್ಯ ಕೆ., ಇವÀಳಿಗೆ “ಜೀಜಾಬಾಯಿ” ಪುರಸ್ಕಾರ ವನ್ನೂ ಮತ್ತು ಎಂಟನೇ ತರಗತಿಯ ಲಲಿತ್ ಚಂದ್ರನಿಗÉ “ಏಕಲವ್ಯ” ಪುರಸ್ಕಾರವನ್ನು ಶ್ರೀಗಳವರು ನೀಡಿದರು. 2023 – 24 ನೇ ಸಾಲಿನ ಸಿ ಬಿ ಎಸ್ ಇ ಶಾಲೆಗಳ ಕೇರಳ ರಾಜ್ಯಮಟ್ಟದ ಕಲೋತ್ಸವದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಶ್ರಾವಣ್ಯ ಕೆ. ಅಭಿರಾಮಿ ಎ ಕೆ., ದುರ್ಗಾದತ್ತ, ಲಲಿತ್ ಚಂದ್ರ ಹಾಗೂ ಅನಿಕ ಸುನಿ ಬಟ್ಯ ಇವರನ್ನು ಅಭಿನಂದಿಸಲಾಯಿತು. ಶಾಲೆಯಲ್ಲಿ ಹಲವು ವರ್ಷಗಳಿಂದ ಸಂಸ್ಕೃತ ಅಧ್ಯಾಪಕರಾಗಿ ಸೇವೆಸಲ್ಲಿಸಿ ಇದೀಗ ಕೇಂದ್ರೀಯ ವಿದ್ಯಾಲಯದಲ್ಲಿ ನಿಯುಕ್ತರಾದ ಸುಬ್ರಹ್ಮಣ್ಯ ಭಟ್‌ರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾ ಯಿತು.
ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಪ್ರಾಂಶುಪಾಲ ಪ್ರವಿದ್ ಸ್ವಾಗತಿಸಿ, ಶಿಕ್ಷಕಿ ರೇಖಾ ಪ್ರದೀಪ್ ವಂದಿಸಿ, ಮಲ್ಲಿಕಾ ನಿರೂಪಿಸಿದರು. ಆಡಳಿತ ಸಮಿತಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page