ಕೊಡಗಿನ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧೆ: ಧನ್ಯಶ್ರೀ ಸರಳಿ ಪ್ರಥಮ

ಬದಿಯಡ್ಕ: 2025ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿನಿಧಿ ಕಥಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿ ಸಲಾಯಿತು. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಇತ್ತೀಚೆಗೆ ಕಿಳಿಂಗಾರು ಸಾಯಿ ನಿಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಜರಗಿದ ಸಮಾರಂಭದಲ್ಲಿ ಪ್ರಥಮ ಬಹುಮಾನ ಪಡೆದ ಧನ್ಯಶ್ರೀ ಸರಳಿ, ದ್ವಿತೀಯ ಹಾಗೂ ತೃತೀಯ ಬಹುಮಾನ ವಿಜೇತರಾದ ಚೈತನ್ಯ ನಿಡುಬೆ ಮತ್ತು ಸರಸ್ವತಿ ಆರ್.ಜಿ. ಭಟ್ ಕುಂಡಡ್ಕ ವೇಣೂರುರಿಗೆ ಶ್ರೀಗಳು ನಗದು, ಪ್ರಶಸ್ತಿ ಪತ್ರ, ಶಾಶ್ವತ ಫಲಕವನ್ನು ನೀಡಿ ಆಶೀರ್ವ ದಿಸಿದರು. ಈ ಸಂದರ್ಭದಲ್ಲಿ ಕೊಡಗಿನ ಗೌರಮ್ಮ ದತ್ತಿನಿಧಿ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಸಂಚಾಲಕಿ ವಿಜಯಾಸುಬ್ರಹ್ಮಣ್ಯ, ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಉಪಸ್ಥಿತರಿದ್ದರು. ಶೀಲಾ ಲಕ್ಷ್ಮೀ ವರ್ಮುಡಿ ನಿರೂಪಿಸಿದರು. ಪ್ರಥಮ ಬಹಮಾನ ಪಡೆದ ಧನ್ಯಶ್ರೀ ಸರಳಿ ಅವರು ಪತ್ರಕರ್ತ, ಛಾಯಾಗ್ರಾಹಕ ಶ್ಯಾಮಪ್ರಸಾದ ಸರಳಿ ಇವರ ಪತ್ನಿ. ಎಂ.ಕಾಂ. ಪದವೀಧರೆಯಾದ ಇವರು ಕಥೆ, ಕವನ, ದೇವರ ನಾಮ ಸಂಕೀರ್ತನೆಗಳನ್ನು ರಚಿಸುವುದು ಹವ್ಯಾಸ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page