ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್ ಚುನಾವಣೆ ನಾಳೆ: ಸಿಪಿಎಂ ಅಭ್ಯರ್ಥಿಗಳ ಗೆಲ್ಲಿಸಲು ಕರೆ
ಕೊಡ್ಲಮೊಗರು: ಕೊಡ್ಲಮೊಗರು ಪಾತೂರು ಸೇವಾ ಸಹಕಾರಿ ಬ್ಯಾಂಕ್‌ನ ನೂತನ ಆಡಿತ ಮಂಡಳಿಗಿರುವ ಚುನಾವಣೆ ನಾಳೆ ನಡೆಯಲಿದ್ದು, ಇದರಲ್ಲಿ ಸ್ಪರ್ಧಿಸುವ ಸಿಪಿಎಂನ ಎಲ್ಲಾ ಉಮೇದ್ವಾರರನ್ನು ಜಯಗೊಳಿಸಬೇಕೆಂದು ಸಿಪಿಎಂ ಲೋಕಲ್ ಕಾರ್ಯದರ್ಶಿ ಕರೆ ನೀಡಿದ್ದಾರೆ.
ಕಳೆದ ೬೦ ವರ್ಷಗಳಿಂದ ಆಡಳಿತ ನಡೆಸಿ ಅನುಭವ ಹೊಂದಿದ ಬ್ಯಾಂಕ್‌ನ್ನು ಲಾಭದತ್ತ ಕೊಂಡೊಯ್ದುದು ಸಿಪಿಎಂ ಆಡಳಿತ ಸಮಿತಿಯಾಗಿದ್ದು, ಈ ಬಾರಿಯೂ ಅಧಿಕಾರಕ್ಕೇರಬೇಕಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.