ಉಪ್ಪಳ: ಪೈವಳಿಕೆ ಬಳಿಯ ಕೊಮ್ಮಂಗಳ ಸೋಲಾರ್ ಪ್ಲಾಂಟ್ ಸಮೀಪದಲ್ಲಿರುವ ಹಲವು ಎಕ್ರೆ ಸ್ಥಳದಲ್ಲಿದ್ದ ಕಾಡು ಪೊದೆಗಳಿಗೆ ನಿನ್ನೆ ಸಂಜೆ ಬೆಂಕಿ ತಗಲಿ ಉರಿದಿದೆ. ಊರವರು ಹಾಗೂ ಉಪ್ಪಳದ ಅಗ್ನಿಶಾಮಕದಳ ತಲುಪಿ ನಡೆಸಿದ ಕಾರ್ಯಾಚರಣೆಯಲ್ಲಿ ಬೆಂಕಿ ಯನ್ನು ನಂದಿಸಲಾಗಿದ್ದು, ಇದ ರಿಂದ ಸೋಲಾರ್ ಪ್ಲಾಂಟ್ ಸಮೀಪಕ್ಕೆ ಬೆಂಕಿ ಹರಡುವುದನ್ನು ತಪ್ಪಿಸಲಾಗಿದೆ.