ಕೊರಿಯರ್ ಸರ್ವಿಸ್ ಮಾಲಕನ ಆತ್ಮಹತ್ಯೆ: ಇಬ್ಬರ ವಿರುದ್ಧ ಕೇಸು
ಕಾಸರಗೋಡು: ಕೊರಿಯರ್ ಸರ್ವಿಸ್ ಸಂಸ್ಥೆಯ ಮಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಇಬ್ಬರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವೆಳ್ಳರಿಕುಂಡ್ ಚುಳ್ಳಿಕ್ಕರದ ಕೊರಿಯರ್ ಸಂಸ್ಥೆಯ ಮಾಲಕನಾದ ಪರಪ್ಪ ಪಟ್ಲಳದ ವಿನಯ ಚಂದ್ರನ್ (38) ಆತ್ಮಹತ್ಯೆಗೈದ ವ್ಯಕ್ತಿಯಾಗಿದ್ದಾರೆ. ಇವರ ಸಾವಿಗೆ ಸಂಬಂಧಿಸಿ ಸುಮೇಶ್ ಹಾಗೂ ಆತನ ತಂದೆ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿನಯಚಂದ್ರನ್ ಆತ್ಮಹತ್ಯೆಕುರಿತು ಬರೆದಿಟ್ಟ ಪತ್ರದ ಆಧಾರದಲ್ಲಿ ಕೇಸು ದಾಖಲಿಸಲಾಗಿದೆ.
ವಿನಯಚಂದ್ರನ್ ಕಳೆದ ದಿನ ವಾಸಸ್ಥಳದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದರ ಹಿಂದಿನ ದಿನ ಇವರ ಮೇಲೆ ಹಲ್ಲೆ ನಡೆದಿರುವುದಾಗಿಯೂ ಹೇಳಲಾಗುತ್ತಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ ವಿನಯಚಂದ್ರನ್‌ರ ಆತ್ಮಹತ್ಯೆ ಕುರಿತು ಬರೆದಿಟ್ಟ ಪತ್ರ ಪತ್ತೆಯಾಗಿತ್ತು. ಸ್ನೇಹಿತ ಹಾಗೂ ಆತನ ತಂದೆ ಸೇರಿ ಹಲ್ಲೆಗೈದುದಾಗಿ ಪತ್ರದಲ್ಲಿ ತಿಳಿಸಲಾಗಿದೆ.